ಕೆಜಿಎಫ್ ಸಿನಿಮಾ ಟ್ರೇಲರ್ ರಿಲೀಸ್ ಸನಿಹವಾಗುತ್ತಿದ್ದಂತೆಯೇ ಚಿತ್ರದ ಕುರಿತು ನಿರೀಕ್ಷೆಗಳೂ ಗಗನಮುಖಿಯಾಗುತ್ತಿವೆ. ಸಿನಿಮಾದ ಬಗ್ಗೆ ಚಿತ್ರತಂಡದ ಕಾನ್ಫಿಡೆನ್ಸ್ ಅಮೋಘ. ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಹೀರೋ ರಾಕಿಂಗ್ ಸ್ಟಾರ್ ಯಶ್ ಅವರಷ್ಟೇ ಆತ್ಮವಿಶ್ವಾಸ ಇರೋದು ಯಶ್ ಪತ್ನಿ ರಾಧಿಕಾ ಪಂಡಿತ್‍ಗೆ.
ನನಗೆ ಚಿತ್ರದ ಕಥೆ ಗೊತ್ತಿದೆ. ಚೆನ್ನಾಗಿದೆ. ಈ ಸಿನಿಮಾ ಬಂದ ಮೇಲೆ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಲಿದೆ. ಹೇಗೆ ರೋಬೋ ನಂತರ ತಮಿಳು ಚಿತ್ರರಂಗ, ಬಾಹುಬಲಿ ನಂತರ ತೆಲುಗು ಚಿತ್ರರಂಗ ನಾವು ಯಾರ್ಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಂಡವೋ.. ಹಾಗೆಯೇ ಈ ಸಿನಿಮಾ ಕೂಡಾ ಕನ್ನಡ ಚಿತ್ರರಂಗವನ್ನು ಆ ಮಟ್ಟಕ್ಕೆ ಕೊಂಡೊಯ್ಯಲಿದೆ. ಈ ಆತ್ಮವಿಶ್ವಾಸದ ಮಾತು ಹೇಳಿರೋದು ರಾಧಿಕಾ ಪಂಡಿತ್.
ನಾನು ಯಶ್ ಪತ್ನಿಯಾಗಿ ಅಷ್ಟೇ ಅಲ್ಲ, ಚಿತ್ರರಂಗದ ಒಬ್ಬ ನಟಿಯಾಗಿ ಕೂಡಾ ಈ ಚಿತ್ರ ಗೆಲ್ಲಬೇಕು. ಇಷ್ಟು ದೊಡ್ಡ ಸಿನಿಮಾ ಗೆದ್ದರೆ, ಅದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿ ತುಂಬಲಿದೆ ಅನ್ನೋದು ರಾಧಿಕಾ ಪಂಡಿತ್ ಭರವಸೆ.
ಕೆಜಿಎಫ್ ಚಿತ್ರದ ಟ್ರೇಲರ್ ನವೆಂಬರ್ 9ಕ್ಕೆ ರಿಲೀಸ್ ಆಗುತ್ತಿದೆ. ಡಿಸೆಂಬರ್ 21ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.