ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೇ ಶಾಕ್ ಕೊಟ್ಟಿದೆ. ಐಎಂಡಿಬಿಯಲ್ಲಿ ದೇಶದ ಬಹುನಿರೀಕ್ಷಿತ ಚಿತ್ರಗಳ ಲಿಸ್ಟ್‍ನಲ್ಲಿ ಯಶ್‍ರ ಕೆಜಿಎಫ್ 4ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನ, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ್ದು.
ನಂ.1 ಸ್ಥಾನದಲ್ಲಿ ರಜನಿ, ಅಕ್ಷಯ್ ಅಭಿನಯದ 2.0, 2ನೇ ಸ್ಥಾನದಲ್ಲಿ ವಿಜಯ್ ಅಭಿನಯದ ಸರ್ಕಾರ್, 3ನೇ ಸ್ಥಾನದಲ್ಲಿ ಶಾರುಕ್ ಅಭಿನಯದ ಝೀರೋ ಇದ್ದರೆ, 4ನೇ ಸ್ಥಾನದಲ್ಲಿರೋದು ಹೊಂಬಾಳೆ ಬ್ಯಾನರ್‍ನ ಕೆಜಿಎಫ್.
ಡಿಸೆಂಬರ್‍ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ, ಕರ್ನಾಟಕ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲೂ ಹವಾ ಸೃಷ್ಟಿಸುತ್ತಿದೆ.