ಒಳ್ಳೆ ಹುಡ್ಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ಈಗ ಎಂಎಲ್‍ಎ ಆಗಿಬಿಟ್ಟಿದ್ದಾರೆ. ಇದೇ ನವೆಂಬರ್ 9ಕ್ಕೆ ಎಲ್ಲ ಚೆನ್ನಾಗಿದ್ದೀರಾ ಹೆಂಗೆ ಅಂತಾ ವಿಚಾರಿಸೋಕೆ ಬರ್ತಾನೂ ಇದ್ದಾರೆ. ಹಾಗೆ ಬಂದ ಪ್ರಥಮ್‍ರನ್ನು ನೀವೂ ಚೆನ್ನಾಗಿದ್ದೀರಾ ಎಂದು ವಿಚಾರಿಸಿ ಸತ್ಕರಿಸೋದು ಪ್ರೇಕ್ಷಕರ ಹೊಣೆ. ಪ್ರಥಮ್ ಅಭಿನಯದ ಎಂಎಲ್‍ಎ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.
ಸಾಮಾನ್ಯ ಹುಡುಗನೊಬ್ಬ ಎಂಎಲ್‍ಎ ಆಗುವ ಗುರಿ ಇಟ್ಟುಕೊಂಡು ಗೆಲ್ಲುವ ಕಥೆ ಚಿತ್ರದ್ದು. ಪ್ರಥಮ್ ಜೊತೆಗೆ ಸೋನಾಲ್ ಮಾಂಟೆರೋ ನಾಯಕಿಯಾಗಿದ್ದರೆ, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸಿದ್ದಾರೆ. ವೆಂಕಟೇಶ್ ರೆಡ್ಡಿ ನಿರ್ಮಾಣದ ಸಿನಿಮಾಗೆ ಮೌರ್ಯ ನಿರ್ದೇಶನವಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನಟಿಸಿರುವುದು ವಿಶೇಷ.