ನೀನಾಸಂ ಸತೀಶ್. ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ. ಅಯೋಗ್ಯ ಚಿತ್ರದ ಸಕ್ಸಸ್ ನಂತರ ಸತೀಶ್ ಸ್ಟಾರ್‍ಗಿರಿ ಮತ್ತೊಮ್ಮೆ ಏರುಗತಿಯಲ್ಲಿದೆ. ಹೀಗಾಗಿ ಡಿಮ್ಯಾಂಡ್ ಜಾಸ್ತಿಯೇ ಇದೆ. ನೀನಾಸಂ ಸತೀಶ್ ಅವರ ಚಂಬಲ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಈ ಚಿತ್ರಕ್ಕೆ ನೆಟ್‍ಫ್ಲಿಕ್ಸ್‍ನವರು 10 ಕೋಟಿ ರೂ. ಕೊಟ್ಟು ಖರೀದಿ ಮಾಡೋಕೆ ಮುಂದೆ ಬಂದಿದ್ದಾರೆ. ವಿಶೇಷ ಅಂದ್ರೆ, ಈ ಆಫರ್‍ನ್ನು ನೀನಾಸಂ ಸತೀಶ್ ತಿರಸ್ಕರಿಸಿರುವುದು.
ಹೌದು. 10 ಕೋಟಿ ಆಫರ್‍ನ್ನು ಸತೀಶ್ ತಿರಸ್ಕರಿಸೋಕೆ ಕಾರಣವೂ ಇದೆ. ಈ ಚಿತ್ರವನ್ನು ನೆಟ್‍ಫ್ಲಿಕ್ಸ್‍ನವರು 10 ಕೋಟಿ ಖರೀದಿಸೋದೇನೋ ನಿಜ, ಆದರೆ, ಅವರದ್ದು ಒಂದೇ ಷರತ್ತು. ಸಿನಿಮಾವನ್ನು ಥಿಯೇಟರುಗಳಿಗೆ ರಿಲೀಸ್ ಮಾಡಬಾರದು ಅನ್ನೋದು. ಇದು ಸತೀಶ್‍ಗೆ ಇಷ್ಟವಾಗಿಲ್ಲ. ಹೀಗಾಗಿ, ಈಗ ಜನಪ್ರಿಯವಾಗುತ್ತಿರುವ ನೆಟ್‍ಫ್ಲಿಕ್ಸ್‍ನ ಆಫರ್‍ನ್ನೇ ಸತೀಶ್ ತಿರಸ್ಕರಿಸಿದ್ದಾರೆ.