ರಾಜ್ಯಾದ್ಯಂತ ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮ. ಪೈಲ್ವಾನ್ ಚಿತ್ರದ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿರುವ ಕಿಚ್ಚ ಸುದೀಪ್ ಮತ್ತು ಪೈಲ್ವಾನ್ ಚಿತ್ರತಂಡ, ಅಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಚಿತ್ರೀಕರಣದ ಜಾಗದಲ್ಲೇ ಪೈಲ್ವಾನ್ ಚಿತ್ರತಂಡದ ಸದಸ್ಯರೆಲ್ಲ ಸೇರಿ, ಧ್ವಜಾರೋಹಣ ಮಾಡಿದ್ದಾರೆ. ತಾಯಿ ಭುವನೇಶ್ವರಿ ಭಾವಚಿತ್ರವನ್ನು ಪೂಜಿಸಿದ್ದಾರೆ.
ಈ ಸಂದರ್ಭದಲ್ಲಿ ಸುದೀಪ್, ನಾಡಧ್ವಜದ ಎದುರು ಬರಿಗಾಲಿನಲ್ಲಿ ವಿನೀತರಾಗಿ ನಿಂತು ಕೈ ಮುಗಿಯುತ್ತಿರುವ ಫೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.