ಪವನ್ ಕಲ್ಯಾಣ್, ತೆಲುಗು ಚಿತ್ರರಂಗದ ಪವರ್‍ಸ್ಟಾರ್. ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿಯೇ ಶುಭ ಕೋರುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. 63ನೇ ಕನ್ನಡ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ಕನ್ನಡ ಜನತೆಗೆ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಟ್ವೀಟ್ ಮಾಡಿದ್ದಾರೆ ಪವನ್ ಕಲ್ಯಾಣ್.
ಪವನ್ ಕಲ್ಯಾಣ್‍ಗೆ, ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗೆ ಆಂಧ್ರ, ತೆಲಂಗಾಣದಲ್ಲಿ ಸಿಗುವಂಥದ್ದೇ ಓಪನಿಂಗ್ ಕರ್ನಾಟಕದಲ್ಲೂ ಸಿಗುತ್ತೆ. ಇದೆಲ್ಲದರ ಜೊತೆಗೆ ಎಲೆಕ್ಷನ್ ಹತ್ತಿರದಲ್ಲೇ ಇದೆ. ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಕನ್ನಡಿಗರನ್ನು ಸೆಳೆಯುವ ಪ್ರಯತ್ನವೂ ಇದರ ಹಿಂದಿದೆ ಎಂಬ ಲೆಕ್ಕಾಚಾರವೂ ಇದೆ. ಏನೇ ಇರಲಿ, ಪರಭಾಷೆಯ ಕಲಾವಿದರೊಬ್ಬರು ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರುವುದನ್ನು ಸ್ವಾಗತಿಸಲೇಬೇಕು. ಅಂದಹಾಗೆ, ನವೆಂಬರ್ 1, ಕರ್ನಾಟಕಕ್ಕೆ ಮಾತ್ರ ಅಲ್ಲ, ಆಂಧ್ರಪ್ರದೇಶಕ್ಕೂ ರಾಜ್ಯೋತ್ಸವದ ದಿನ. ಆಂಧ್ರಪ್ರದೇಶ ಜನರಿಗೂ, ತೆಲುಗು ರಾಜ್ಯೋತ್ಸವದ ಶುಭಾಶಯಗಳು.