` ಶೃತಿಗೆ ವಿಸ್ಮಯ ನಿರ್ಮಾಪಕ, ನಿರ್ದೇಶಕ ಕೊಟ್ಟ ಶಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vismaya director and producer support arjun sarja
Vismaya Team

ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ಶೃತಿ ಇದ್ದದ್ದೇ 9 ದಿನ. ಆ 9 ದಿನಕ್ಕೆ ನಾವು 3 ಲಕ್ಷ ರೂ. ಸಂಭಾವನೆ ನೀಡಿದ್ದೇವೆ. ಶೂಟಿಂಗ್‍ಗೆ ರಿಹರ್ಸಲ್ ನಡೆದಿದ್ದುದು ನಿಜ. ಆದರೆ, ಇಂತಹ ಘಟನೆ ನಡೆದಿರುವುದು ನಮಗೆ ಗೊತ್ತಿಲ್ಲ. ಏಕೆಂದರೆ, ಶೃತಿ ಒಮ್ಮೆಯೂ ಇಂತಹ ಘಟನೆಗಳ ಬಗ್ಗೆ ನಮ್ಮಲ್ಲಿ ಹೇಳಿಕೊಂಡಿಲ್ಲ. ಆಕ್ಷೇಪವನ್ನೂ ಮಾಡಿರಲಿಲ್ಲ. ಈಗ ಅವರ ಆರೋಪ ಕೇಳಿದರೆ ಅಚ್ಚರಿಯಾಗುತ್ತಿದೆ. ಇದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪೊಲೀಸರ ಎದುರು ನೀಡಿರುವ ಹೇಳಿಕೆ.

ವಿಸ್ಮಯ ಚಿತ್ರದಲ್ಲಿ ಇನ್ನೂ ಹೆಚ್ಚು ರೊಮ್ಯಾಂಟಿಕ್ ಸೀನ್‍ಗಳಿದ್ದವು. ಎರಡು ಬೆಡ್‍ರೂಂ ದೃಶ್ಯಗಳಿದ್ದವು. ಆದರೆ, ಸರ್ಜಾ ಅವರೇ ಈ ವಯಸ್ಸಿನಲ್ಲಿ ಇದೆಲ್ಲ ಬೇಡ. ಚಿತ್ರಕ್ಕೆ ತೀರಾ ಅಗತ್ಯವಿರುವಷ್ಟು ಮಾತ್ರ ರೊಮ್ಯಾನ್ಸ್ ಸೀನ್ ಇರಲಿ ಎಂದು ಕೇಳಿಕೊಂಡರು. ಅವರು ಕೇಳಿದಂತೆಯೇ ಕೆಲ ದೃಶ್ಯಗಳನ್ನು ಕೈಬಿಟ್ಟೆವು ಎಂದಿದ್ದಾರೆ ಅರುಣ್ ವೈದ್ಯನಾಥನ್.

ಚಿತ್ರದ ನಿರ್ಮಾಪಕ ಉದಯ್ ಕುಮಾರ್ ಕೂಡಾ ಶೃತಿ ಆರೋಪವನ್ನು ಅಲ್ಲಗಳೆದಿದ್ದಾರೆ. 43 ದಿನಗಳ ಶೂಟಿಂಗ್‍ನಲ್ಲಿ ಶೃತಿ ಅವರು ಇದ್ದದ್ದು 9 ದಿನ ಮಾತ್ರ. ಯಾವುದೇ ತಕರಾರು, ಆರೋಪಗಳಿರಲಿಲ್ಲ. ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದನ್ನು ಕೇಳಿ ನಿಜಕ್ಕೂ ಶಾಕ್ ಆಯಿತು ಎಂದಿದ್ದಾರೆ ಉದಯ್ ಕುಮಾರ್.

ಅಷ್ಟೇ ಅಲ್ಲ, ಶೃತಿ ಅವರ ಬೆನ್ನಿಗೆ ನಿಂತಿರುವ ನಟ ಚೇತನ್, ವಿಸ್ಮಯ ಚಿತ್ರದ ವಿಲನ್ ರೋಲ್‍ಗೆ ಆಯ್ಕೆಯಾಗಿದ್ದರಂತೆ. ಆದರೆ, ಕೊನೆಗೆ ಜಯರಾಮ್ ಕಾರ್ತಿಕ್(ಜೆಕೆ)ರನ್ನು ಆಯ್ಕೆ ಮಾಡಲಾಯಿತಂತೆ. ಇದಕ್ಕೆ ಸರ್ಜಾ ಕಾರಣ ಎಂಬ ಅಸಮಾಧಾನ ಇದ್ದರೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ನಿರ್ಮಾಪಕ ಉದಯ್ ಕುಮಾರ್.

ಒಟ್ಟಿನಲ್ಲಿ ಪೊಲೀಸರ ಎದುರು ವಿಸ್ಮಯ ಚಿತ್ರದ ನಿರ್ಮಾಪಕ, ನಿರ್ದೇಶಕ.. ಇಬ್ಬರ ಹೇಳಿಕೆಗಳೂ ಶೃತಿ ಹರಿಹರನ್ ಆರೋಪಗಳಿಗೆ ವ್ಯತಿರಿಕ್ತವಾಗಿಯೇ ಮೂಡಿಬಂದಿವೆ.