ಸಂಗೀತಾ ಭಟ್ ಅವರ ಮೀಟೂ ಆರೋಪ ಕುರಿತಂತೆ ಮಾತನಾಡಿದ್ದ ನಿರ್ದೇಶಕ ಗುರು ಪ್ರಸಾದ್ ವಿರುದ್ಧ, ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಿಟ್ಟಾಗಿದ್ದಾರೆ. ನನ್ನ ಪತ್ನಿ ಸಂಗೀತಾ ಭಟ್, ಮೀಟೂ ಆರೋಪ ಮಾಡಿದ್ದು, ನೋವು ಹೇಳಿಕೊಳ್ಳುವುದಕ್ಕೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಚಿತ್ರರಂಗದಲ್ಲಿ ಯಾರದ್ದೋ ಹೆಸರು ಹೇಳಿ ಲಾಭ ಮಾಡಿಕೊಳ್ಳುವ ಉದ್ದೇಶವೂ ನಮಗಿಲ್ಲ. ಅವರು ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದ್ಯಾಕೆ ಎಂದಿದ್ದಾರೆ ಸುದರ್ಶನ್.
ಸಂಗೀತಾ ಭಟ್ ಅವರು ಮೀಟೂ ಆರೋಪ ಮಾಡಿದ ಮೇಲೆ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಇಬ್ಬರು ಮೇಯ್ಲ್ ಮೂಲಕ ಕ್ಷಮೆ ಕೇಳಿದ್ದಾರಂತೆ. ನಮ್ಮ ಉದ್ದೇಶ ಇನ್ನೊಂದು ಕುಟುಂಬದ ನೆಮ್ಮದಿ ಹಾಳು ಮಾಡುವುದಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕಿರುಕುಳ ನಿಲ್ಲಬೇಕು. ಅಷ್ಟೆ. ಹೀಗಾಗಿಯೇ ಸಂಗೀತಾ ಯಾರ ಹೆಸರನ್ನೂ ಹೇಳಿಲ್ಲ. ನಮಗೆ ಗುರುಪ್ರಸಾದ್ ಸರ್ಟಿಫಿಕೇಟ್ ಅಗತ್ಯವೂ ಇಲ್ಲ ಎಂದಿದ್ದಾರೆ ಸುದರ್ಶನ್.