ಹರಿಪ್ರಿಯಾ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಸೂಜಿದಾರ ಚಿತ್ರತಂಡ ಪುಟ್ಟದೊಂದು ಟೀಸರ್ ಹೊರಬಿಟ್ಟಿದೆ. 1 ನಿಮಿಷದ ಟೀಸರ್‍ನಲ್ಲಿ ಹರಿಪ್ರಿಯಾ ಕಣ್ಣ ನೋಟದಲ್ಲೇ ಕಿಚ್ಚು ಹಚ್ಚಿದ್ದಾರೆ. ತಲೆ ಬಾಚಿಕೊಳ್ಳುತ್ತಾ ಹೊರಬರುವ ಹರಿಪ್ರಿಯಾ, ಮಹಡಿ ಮೇಲಿನಿಂಚ ಬಾಚಣಿಗೆ ಬೀಳಿಸುತ್ತಾರೆ. ಯಶವಂತ್ ಶೆಟ್ಟಿ ಬಾಚಣಿಗೆ ಎತ್ತಿ ಕೊಡುತ್ತಾರೆ. ಟೀಸರ್‍ನಲ್ಲಿರೋದು ಇಷ್ಟೆ. ಆದರೆ, ಇದರ ನಡುವೆ ಪುಟ್ಟದಾದ ಒಂದು ಹಾಡು, ಹರಿಪ್ರಿಯಾ ಕಣ್ಣೋಟ ನೋಡುಗರೆದೆಗೆ ಕಿಚ್ಚು ಹಚ್ಚಿದೆ. ಗ್ಲಾಮರಸ್ ಗೃಹಿಣಿಯಾಗಿ, ನಿರಾಭರಣ ಸುಂದರಿಯಾಗಿ ಗೆದ್ದಿದ್ದಾರೆ ಹರಿಪ್ರಿಯಾ.
ರಂಗಭೂಮಿ ಹಿನ್ನೆಲೆಯಿಂದ ಮೌನೇಶ್ ಬಡಿಗೇರ್ ನಿರ್ದೇಶನದ ಚಿತ್ರಕ್ಕೆ ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚಿಂದ್ರ ನಾಯಕ್ ಬೆಳ್ತಂಗಡಿ ನಿರ್ಮಾಪಕರು.