` ವಿಕ್ಟರಿ 2 ಹುಟ್ಟಿದ್ದರ ಹಿಂದಿದೆ ಗಮ್ಮತ್ತಿನ ಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sharan's victory 2 movie image
Victory 2

ವಿಕ್ಟರಿ 2 ಚಿತ್ರಮಂದಿರದಲ್ಲಿದೆ. ಜನ ಕುಟ್ಟಪ್ಪ ಹಾಡಿಗೆ ಕುಣಿಯುತ್ತಾ.. ನಾವ್ ಮನೆಗ್ ಹೋಗೋದಿಲ್ಲ ಎನ್ನುತ್ತಿದ್ದಾರೆ. ಅಸ್ಮಿತಾ ಸೂದ್, ಅಪೂರ್ವ ಇಬ್ಬರ ಜೊತೆಯೂ ರೊಮ್ಯಾನ್ಸ್ ಮಾಡಿರುವ ಶರಣ್, ವಿಕ್ಟರಿ 4 ಎನ್ನುತ್ತಿದ್ದಾರೆ. ಸಾಧುಕೋಕಿಲ, ರವಿಶಂಕರ್ ಕೂಡ ಹೆಣ್ಣಿನ ವೇಷದಲ್ಲಿ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಹರಿ ಸಂತೋಷ್ ನಿರ್ದೇಶನದಲ್ಲಿ ವಿಕ್ಟರಿ ಸಿನಿಮಾದ ಸೀಕ್ವೆಲ್ ಬರೋಕೆ ಏನ್ ಕಾರಣ ಗೊತ್ತಾ..? ಅದೇ ಗಮ್ಮತ್ತು. 

ಅದಕ್ಕೆಲ್ಲ ಕಾರಣವಾಗಿದ್ದು ಒಂದು ಟ್ರೋಲ್. ಬಾಹುಬಲಿ 2 ರಿಲೀಸ್ ಆಗುವ ವೇಳೆ ಕಟ್ಟಪ್ಪ ಯಾಕೆ ಬಾಹುಬಲಿನ ಕೊಂದ ಅನ್ನೋ ಮೆಸೇಜ್ ಟ್ರೋಲ್ ಆಗುತ್ತಿತ್ತು. ಆ ವೇಳೆಯಲ್ಲೆ ವಿಕ್ಟರಿ ಚಿತ್ರದಲ್ಲಿ ತಬಲಾ ನಾಣಿ ಹೆಂಡತಿ ಯಾರು. ಗೊತ್ತೇ ಆಗಲಿಲ್ಲ ಅನ್ನೋ ಟ್ರೋಲ್ ಬರೋಕೆ ಶುರುವಾಯ್ತು. ಅರೆ.. 4 ವರ್ಷವಾದರೂ ಜನ ಇನ್ನು ಅದನ್ನು ನೆನಪಿಟ್ಟುಕೊಂಡಿದ್ದಾರಲ್ಲ ಎಂದು ಖುಷಿಯಾಯ್ತು. ಆ ಖುಷಿಯಲ್ಲೇ ಸೀಕ್ವೆಲ್ ಯಾಕೆ ಮಾಡಬಾರದು ಅನ್ನೋ ಕನಸು ಹುಟ್ಟಿತು. ವಿಕ್ಟರಿ 2 ಅಯ್ತು ಎಂದು ಗುಟ್ಟು ಬಿಚ್ಚಿಟ್ಟಿದ್ದಾರೆ ಶರಣ್.

ಹೀಗಾಗಿ ವಿಕ್ಟರಿ ತಂಡವೇ ಮತ್ತೊಮ್ಮೆ ಸೇರಿಕೊಂಡು ವಿಕ್ಟರಿ 2 ಸಿನಿಮಾ ಮಾಡಿದೆ. ನಿರ್ಮಾಪಕರು ತರುಣ್ ಶಿವಪ್ಪ. ಉಳಿದಂತೆ.. ಆಲ್‍ಮೋಸ್ಟ್ ವಿಕ್ಟರಿ ತಂಡವೇ ವಿಕ್ಟರಿ 2ನಲ್ಲೂ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery