ಶರಣ್ ಅಭಿನಯದ ವಿಕ್ಟರಿ 2 ಚಿತ್ರದಲ್ಲಿ ಶರಣ್ ಹೀರೋ ಎನ್ನುವುದರಲ್ಲೇನೂ ಡೌಟಿಲ್ಲ. ಆದರೆ, ಅವರ ಪಾತ್ರ ಯಾವುದು..? ಅದೇ ದೊಡ್ಡ ಸಸ್ಪೆನ್ಸ್. ಚಿತ್ರದಲ್ಲಿ ಶರಣ್, 4 ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ವಿಕ್ಟರಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದ ಶರಣ್, ಈ ಚಿತ್ರದಲ್ಲಿ 4 ಪಾತ್ರಗಳಲ್ಲಿ ಮಿಂಚಲಿದ್ದಾರೆ.
ರಾಜಕಾರಣಿಯಾಗಿ, ತರಲೆ ಯುವಕನಾಗಿ, ಹುಡುಗಿಯಾಗಿ, ಬ್ಯುಸಿನೆಸ್ಮ್ಯಾನ್ ಆಗಿ ಮಿಂಚಲಿದ್ದಾರೆ ಶರಣ್. ಒಂದೊಂದು ಪಾತ್ರಕ್ಕೂ ಒಂದೊಂದು ಹೆಸರೂ ಇದೆ. ಅಸ್ಮಿತಾ ಸೂದ್ ಮತ್ತು ಅಪೂರ್ವ ಚಿತ್ರಕ್ಕೆ ನಾಯಕಿಯರು. ಕಾಮಿಡಿ ಕಿಕ್ ಹೆಚ್ಚಿಸೋಕೆ ರವಿಶಂಕರ್ ಮತ್ತು ಸಾಧುಕೋಕಿಲ ಇಬ್ಬರೂ ಇದ್ದಾರೆ.
ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.