` ತಾಯಿಗೆ ತಕ್ಕ ಮಗ ನಂತರ ಶಶಾಂಕ್ ಉಪ್ಪಿ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shsshank all set to work with upendra
Shashank, Upendra

ತಾಯಿಗೆ ತಕ್ಕ ಮಗ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಶಶಾಂಕ್, ತಮ್ಮ ಮುಂದಿನ ಚಿತ್ರವನ್ನೂ ಪ್ರಕಟಿಸಿಬಿಟ್ಟಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ಸಕ್ಸಸ್ ಸುದ್ದಿಗೋಷ್ಟಿಯಲ್ಲೇ ಮುಂದಿನ ಸಿನಿಮಾ ಘೋಷಿಸಿರುವ ಶಶಾಂಕ್,  ತಾಯಿಗೆ ತಕ್ಕ ಮಗ ರಿಲೀಸ್ ನಂತರ ಉಪ್ಪಿ ಸಿನಿಮಾ ಕೆಲಸಗಳು ಶುರುವಾಗಲಿವೆ ಎಂದಿದ್ದಾರೆ.

ಚಿತ್ರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದವರು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ. 2019ರ ಆರಂಭದಿಂದಲೇ ಉಪ್ಪಿ ಸಿನಿಮಾ ಕೆಲಸ ಶುರುವಾಗಲಿದೆ ಎಂದಿದ್ದಾರೆ ಶಶಾಂಕ್. ಸದ್ಯಕ್ಕೆ ತಾಯಿಗೆ ತಕ್ಕ ಮಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ನವೆಂಬರ್ 16ಕ್ಕೆ ತಾಯಿಗೆ ತಕ್ಕ ಮಗ ರಿಲೀಸ್ ಆಗುತ್ತಿದ್ದು, ಸುಮಲತಾ ಅಂಬರೀಷ್, ಅಜೇಯ್ ರಾವ್, ಅಶಿಕಾ ರಂಗನಾಥ್ ಪ್ರಧಾನ ಪಾತ್ರಗಳಲ್ಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery