ರಾಘವೇಂದ್ರ ರಾಜ್ಕುಮಾರ್ ಮತ್ತು ದಯಾಳ್ ಪದ್ಮನಾಭನ್ ಜೊತೆಯಾಗುತ್ತಿದ್ದಾರೆ. ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳ ಮೂಲಕ ವಿಭಿನ್ನತೆಯ ಛಾಪು ಮೂಡಿಸಿರುವ ದಯಾಳ್ ಪದ್ಮನಾಭನ್, ಈ ಬಾರಿ ರಾಘವೇಂದ್ರ ರಾಜ್ಕುಮಾರ್ಗೆ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.
ತ್ರಯಂಬಕಮ್ ಅನ್ನೋದು ಈ ಸಿನಿಮಾದ ಹೆಸರು. ದಯಾಳ್ ಅವರ ಜೊತೆ ಸಂಭಾಷಣೆಕಾರರಾಗಿ ನವೀನ್ ಕೃಷ್ಣ ಇರುತ್ತಾರೆ. ರೋಹಿತ್ ಮತ್ತು ಅನುಪಮಾ ಗೌಡ ಚಿತ್ರದ ತಾರಾಗಣದಲ್ಲಿರುತ್ತಾರೆ. ನವೆಂಬರ್ 9ರಂದು ಚಿತ್ರ ಸೆಟ್ಟೇರಲಿದೆ. ದಯಾಳ್ ಪದ್ಮನಾಭನ್ ಅವರ ಪುಟ 109 ತೆರೆಗೆ ಸಿದ್ಧವಾಗಿದ್ದು, ಹೊಸ ಚಿತ್ರವೂ ಶೀಘ್ರದಲ್ಲೇ ಶುರುವಾಗಲಿದೆ.