ರೆಬಲ್‍ಸ್ಟಾರ್ ಅಂದ್ರೆ ಅಂಬಿ, ಪವರ್ ಸ್ಟಾರ್ ಅಂದ್ರೆ ಪುನೀತ್, ಚಾಲೆಂಜಿಂಗ್ ಸ್ಟಾರ್ ಅಂದ್ರೆ ದರ್ಶನ್, ರೋರಿಂಗ್ ಸ್ಟಾರ್ ಅಂದ್ರೆ ಶ್ರೀಮುರಳಿ, ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್.. ಆದ್ರೆ ಈ ಮಂಡಿ ಸ್ಟಾರ್ ಅಂದ್ರೆ ಏನ್ರಿ..? ಈ ಪ್ರಶ್ನೆಗೆ ಉತ್ತರ ಕಾಮಿಡಿ ಸ್ಟಾರ್ ಶರಣ್.
ಇದು ಶರಣ್‍ಗೆ ಅವರ ಸಿನಿಮಾ ತಂಡದವರೆಲ್ಲ ಸೇರಿ ಕರೀತಿರೋ ಹೆಸರು. ಅದಕ್ಕೆ ಕಾರಣ, ಬೇರೇನಲ್ಲ. ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಒಂದಲ್ಲ ಒಂದು ಹಾಡಿನಲ್ಲಿ ಮಂಡಿ ಮೇಲೆ ಡ್ಯಾನ್ಸ್ ಮಾಡುವ ಸ್ಟೆಪ್ಸ್ ಇದ್ದೇ ಇರುತ್ತೆ. ಹೀಗಾಗಿ ಅವರನ್ನು ಮಂಡಿಸ್ಟಾರ್ ಎಂದು ಚಿತ್ರತಂಡದವರು ರೇಗಿಸ್ತಾ ಇರ್ತಾರಂತೆ.
ರೇಗಿಸಿದಾಗ ಸಂಕೋಚವಾಗುತ್ತೆ. ಆದರೆ ಮಂಡಿ ಮೇಲೆ ಡ್ಯಾನ್ಸ್ ಮಾಡಿ ಮುಗಿಸಿದ ಮೇಲೆ ಮಂಡಿಚಿಪ್ಪು ಅಯ್ಯೋ ಅಂತಿರುತ್ತೆ. ಇಷ್ಟೆಲ್ಲ ಆಗಿ ಡ್ಯಾನ್ಸ್ ನೋಡಿದವರು ಸೂಪರ್ ಎಂದಾಗ ಎಲ್ಲ ನೋವು ಮರೆಯಾಗಿಬಿಡುತ್ತೆ ಅಂತಾರೆ ಶರಣ್.
ಈ ವಾರ ರಿಲೀಸ್ ಆಗ್ತಿರೋ ವಿಕ್ಟರಿ 2ನ ಕುಟ್ಟಪ್ಪ ಸಾಂಗ್‍ನಲ್ಲೂ ಮಂಡಿ ಡ್ಯಾನ್ಸ್ ಇದೆ. ಅದು ಚುಟು ಚುಟು ಹಾಡಿನಂತೆಯೇ ಹಿಟ್ ಆಗಿದೆ.
ಮಂಡಿಸ್ಟಾರ್ ಶರಣ್‍ಗೆ ಮತ್ತೊಂದು ವಿಕ್ಟರಿ 2 ಮತ್ತೊಂದು ಸಕ್ಸಸ್ ಕೊಡುವ ಎಲ್ಲ ಸೂಚನೆಗಳೂ ಸಿಗುತ್ತಿವೆ.