ಮೀಟೂ ಅಭಿಯಾನ ಶುರುವಾದ ಹೊತ್ತಿನಲ್ಲಿ ಈ ಬಗ್ಗೆ ಧ್ವನಿಯೆತ್ತಿ ಸುದೀರ್ಘ 3 ಪುಟಗಳ ಪತ್ರ ಬರೆದಿದ್ದರು ಸಂಗೀತಾ ಭಟ್. ಆದರೆ, ಅದಾದ ಮೇಲೆ ಅವರು ತಮಗೆ ಅಗುತ್ತಿರುವ ಕಿರುಕುಳಕ್ಕೆ ಬಳಲಿ ಬೆಂಡಾಗಿ ಹೋಗಿದ್ದಾರೆ.
ನಾನು ನನಗಾದ ನೋವನ್ನು ಹೇಳಿಕೊಂಡಿದ್ದು ನಿಜ. ಅದಕ್ಕೆ ನಾನೀಗಲೂ ಬದ್ಧ. ನಾನು ಕೇವಲ ಅದನ್ನಷ್ಟೇ ಅಲ್ಲ, ಸಂಬಳ, ತಾರತಮ್ಯಗಳನ್ನೂ ಹೇಳಿಕೊಂಡಿದ್ದೇನೆ. ನಾನು ಯಾರ ಹೆಸರನ್ನೂ ಹೇಳಿರಲಿಲ್ಲ. ಅದು ನನಗೆ ಇಷ್ಟವೂ ಇಲ್ಲ. ಆದರೂ ಕೆಲವರು ನನ್ನ ಆರೋಪದಲ್ಲಿ ಚಿರಂಜೀವಿ ಸರ್ಜಾ ಹೆಸರು ಥಳುಕು ಹಾಕುತ್ತಿದ್ದಾರೆ. ಅದು ಸರಿಯಲ್ಲ. ದಯವಿಟ್ಟು ಯಾರೋ ಮಾಡಿದ ತಪ್ಪಿಗೆ ಇನ್ಯಾರ ಹೆಸರನ್ನೋ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಸಂಗೀತಾ ಭಟ್.
ನನಗಾದ ಹಿಂಸೆಯ ನೋವು ಹೆಸರು ಹೇಳಿದರೆ ಸರಿ ಹೋಗೋದಿಲ್ಲ. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ. ಅಷ್ಟೇ ಸಾಕು ಎಂದಿದ್ದಾರೆ ಸಂಗೀತಾ ಭಟ್.