` ಭಟ್ರ ಕ್ವಾಟ್ರುಗೆ ಕಿಕ್ ಕೊಡೋರು ಯಾರಂತ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogaraj bhat's yenne song in victory 2
Sharan, Yogaraj Bhat

ವಿಕ್ಟರಿ 2 ಚಿತ್ರದ ನಾವ್ ಮನೆಗ್ ಹೋಗೋದಿಲ್ಲ ಅನ್ನೋ ಹಾಡು ಹಿಟ್ಟಾಗಿದ್ದೇ ತಡ, ಈಗ ಎಲ್ಲರಲ್ಲೂ ಒಂದೇ ಪ್ರಶ್ನೆ. ಇದೊಂಥರಾ ಕುಡುಕರ ಕಾಂಬಿನೇಷನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅಷ್ಟರಮಟ್ಟಿಗೆ ಟೀಮು ಒಟ್ಟಾಗಿಬಿಟ್ಟಿದೆ. 

ಖಾಲಿ ಕ್ವಾಟ್ರು ಹಾಡು ಬರೆದಿದ್ದು ಭಟ್ಟರು. ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಹೊಡಿ ಒಂಭತ್.. ಹೀಗೆ ಎಣ್ಣೆ ಹಾಡುಗಳನ್ನು ಕಿಕ್ಕು ಹೊಡೆದವರಂತೆ ಕೊಡುತ್ತಿದ್ದಾರೆ. ಈಗ ವಿಕ್ಟರಿ 2ನಲ್ಲಿ..  ನಾವ್ ಮನೆಗ್ ಹೋಗೋದಿಲ್ಲ ಹಾಡು.

ಇಲ್ಲಿ ಇವರೊಬ್ಬರೇ ಅಲ್ಲ, ಖಾಲಿ ಕ್ವಾಟ್ರು ಹಾಡಿಗೆ ಸಂಗೀತ ಕೊಟ್ಟಿದ್ದ ಅರ್ಜುನ್ ಜನ್ಯಾ, ಅದೇ ಹಾಡಿಗೆ ಹೆಜ್ಜೆ ಹಾಕಿದ್ದ ಶರಣ್, ಕಿಕ್ಕಿನ ಹಾಡುಗಳಿಗೆ ಕಂಠದಾನ ಮಾಡಿದ್ದ ವಿಜಯ್ ಪ್ರಕಾಶ್.. ಎಲ್ಲವೂ ಸೇಮ್ ಟು ಸೇಮ್ ಕಾಂಬಿನೇಷನ್. ಕಿಕ್ ಹೊಡೆಸೋದು ಯಾರು ಅನ್ನೋದು ಅಭಿಮಾನಿಗಳ ಪ್ರಶ್ನೆ. ವಿಕ್ಟರಿ 2 ನೋಡಿದ್ರೆ, ಅದಕ್ಕೂ ಉತ್ತರ ಸಿಗುತ್ತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery