ಬಿಗ್ಬಾಸ್ ಜೊತೆ ವಿಲನ್ ಬರ್ತಾರೆ. ಬಿಗ್ಬಾಸೂ ಅವ್ರೇ.. ವಿಲನ್ನೂ ಅವ್ರೇ.. ರಾವಣಾನೂ ಅವ್ರೇ.. ನೋ ಡೌಟ್. ಬಿಗ್ಬಾಸ್ ಶೋನಲ್ಲಿ ವಿಲನ್ ಟೀಂ ಸಂಗಮವಾಗಿದೆ.
ಕಿಚ್ಚ ಸುದೀಪ್ ನಡೆಸಿಕೊಡ್ತಿರೋ ಬಿಗ್ಬಾಸ್ ಶೋಗೆ, ಶಿವಣ್ಣ, ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಜೊತೆ ಜೊತೆಯಾಗಿ ಹೋಗಿದ್ದಾರೆ. ಇವರೆಲ್ಲರ ಜೊತೆ ಚಿತ್ರದಲ್ಲಿ ನಟಿಸಿರುವ ತೆಲುಗು ಸ್ಟಾರ್ ನಟ ಶ್ರೀಕಾಂತ್ ಕೂಡಾ ಇರಲಿದ್ದಾರೆ.
ಶಿವಣ್ಣ ಮತ್ತು ಸುದೀಪ್ ಒಟ್ಟಿಗೇ ನಟಿಸಲಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದ್ದೇ ಕಿಚ್ಚ ಸುದೀಪ್ರ ಬಿಗ್ಬಾಸ್ ಶೋನಲ್ಲಿ. ಅದಾದ ನಂತರ ಕಲಿ ಚಿತ್ರ ಶುರುವಾಗಿತ್ತು. ಅದು ಆಗಲಿಲ್ಲ. ವಿಲನ್ ಆಯ್ತು. ಸೂಪರ್ ಹಿಟ್ ಆಯ್ತು. ಈಗ.. ಸೆಲಬ್ರೇಷನ್ ಟೈಂ.