ಏಳು ಸುತ್ತಿನ ಕೋಟೆಯ ದೊರೆ, ಮದಿಸಿದ ಕರಿ(ಆನೆ)ಯ ಮದವಡಗಿಸುತ್ತಿದ್ದ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರೂ ನಟಿಸುವುದು ಪಕ್ಕಾ. ದರ್ಶನ್ ಮದಕರಿ ನಾಯಕನ ಚಿತ್ರ, ಜನವರಿಯಲ್ಲಿ ಸೆಟ್ಟೇರಲಿದೆ. ಸುದೀಪ್ ಮದಕರಿ ನಾಯಕನ ಸಿನಿಮಾ ಕೂಡಾ ಮುಂದಿನ ವರ್ಷ ಶುರುವಾಗಬಹುದು. ಇಷ್ಟಿದ್ದ ಮೇಲೆ ಅಭಿಮಾನಿಗಳದ್ದೇನು..?
ಇದು ಸುದೀಪ್ ಅಭಿಮಾನಿಯೊಬ್ಬನ ಕೈಚಳಕದ ಚಿತ್ರ. ಸುದೀಪ್ ಮದಕರಿ ನಾಯಕನಾದರೆ ಹೇಗೆ ಕಾಣಬಹುದು ಅನ್ನೋದನ್ನ ಕುಂಚದಲ್ಲಿ ಬಿಡಿಸಿದ್ದಾರೆ ಕಿಚ್ಚ ಸುದೀಪ್‍ರ ಅಭಿಮಾನಿ.