ಮೀಟೂ ವಿವಾದ, ಪ್ರಿಯಾಂಕ ಉಪೇಂದ್ರ ಮತ್ತು ಚೇತನ್ ಮಧ್ಯೆ ವಾರ್ ಸೃಷ್ಟಿಸಿದೆ. ಫೈರ್ ಸಂಸ್ಥೆಯಿಂದ ಹೊರಬಂದ ಪ್ರಿಯಾಂಕಾ ಉಪೇಂದ್ರ, ತಮ್ಮ ಕನಸಿನ ಫೈರ್ ಸಂಸ್ಥೆ ಹಾದಿ ತಪ್ಪುತ್ತಿದೆ. ನಟ ಚೇತನ್, ಪ್ರಚಾರದ ಹುಚ್ಚಿಗೆ ಬಿದ್ದು, ಸಂಸ್ಥೆಯ ಧ್ಯೇಯೋದ್ದೇಶವನ್ನೇ ಹಾಳು ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಾಗಿ ಪಬ್ಲಿಸಿಟಿಯೇ ಮುಖ್ಯವಾಗಿದೆ ಎಂದು ದೂರಿದ್ದರು. ಈಗ ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ನಟ ಚೇತನ್ ದೂರಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅವರಿಗೆ ಧೈರ್ಯವೂ ಇರಲಿಲ್ಲ. ಕಾರ್ಯಕ್ರಮ ದಕ್ಷತೆ, ಸಾಮಥ್ರ್ಯ, ಎಲ್ಲರನ್ನೂ ಒಳಗೊಳ್ಳುವ ಸಾಮಥ್ರ್ಯ ಇರಲಿಲ್ಲ ಎಂದಿದ್ದಾರೆ ಚೇತನ್.
ಚೇತನ್ ಮಾತಿಗೆ ಬೇಸರ ವ್ಯಕ್ತಪಡಿಸಿರುವ ಪ್ರಿಯಾಂಕಾ, ಧೈರ್ಯ ಎಂದರೆ ಕೂಗಾಡುವುದಲ್ಲ. ನನ್ನ ಕಾರ್ಯವೈಖರಿಯ ಶೈಲಿಯೇ ಬೇರೆ. ಫೈರ್ ಸಂಸ್ಥೆ ಕಟ್ಟಲು ನಾನು ದುಡಿದಿದ್ದೇನೆ. ಹಲವು ಮಂತ್ರಿ, ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ವಕೀಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.