` ಸೈಬರ್ ಕ್ರೈಂಗೆ ದೂರು - ಶೃತಿ ಆರೋಪಿ ನಂ.1  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arjun sarja files complaint against sruthi hariharan
Arjun Sarja

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದಕ್ಕಾಗಿ ದೂರು ನೀಡಿದ್ದಾರೆ. ಬೆಂಗಳೂರು ಸಿಟಿ ಕಮಿಷನರ್ ಕಚೇರಿಯಲ್ಲಿ ಅರ್ಜುನ್ ಸರ್ಜಾ ಅವರ ಶ್ರೀರಾಂ ಫಿಲಂ ಇಂಟರ್‍ನ್ಯಾಷನಲ್ ಸಂಸ್ಥೆಯ ಮ್ಯಾನೇಜರ್ ಶಿವಾರ್ಜುನ್, ಕಮಿಷನರ್ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ದೂರಿನಲ್ಲಿ ಶೃತಿ ಹರಿಹರನ್ ಅವರನ್ನು ಆರೋಪಿ ನಂ.1 ಎಂದು ನಮೂದಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಅಪರಿಚಿತರು ಎಂದು ನಮೂದಿಸಲಾಗಿದೆ.