ನನ್ನ ನೋವು ಏನು..? ಆರೋಪ ಏನು..? ಅನ್ನೋದನ್ನ ಇವತ್ತಿನ ವಾಣಿಜ್ಯ ಮಂಡಳಿ ಸಭೆಯಲ್ಲಿ ಹೇಳಿಕೊಂಡಿದ್ದೇನೆ. ಅರ್ಜುನ್ ಸರ್ಜಾ ನನ್ನ ವಿರುದ್ಧ ಒಂದಲ್ಲ, 2 ಕೇಸ್ ಹಾಕಿದ್ದಾರೆ. ನಾನೂ ಕೂಡಾ ಕೋರ್ಟ್‍ಗೇ ಹೋಗುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.
ಪ್ರತಿ ಬಾರಿಯೂ, ನೋವನ್ನೂ ಅನುಭವಿಸಿ ನಾವೇ.. ಹೆಣ್ಣು ಮಕ್ಕಳೇ ಕ್ಷಮೆ ಕೇಳಬೇಕಾ ಎಂದರು ಶೃತಿ ಹರಿಹರನ್. ವಾಣಿಜ್ಯ ಮಂಡಳಿ ಬಗ್ಗೆ ನನಗೆ ಗೌರವ ಇದೆ. ಹಾಗಾಗಿಯೇ ಅಂಬರೀಷ್ ಸರ್ ನೇತೃತ್ವದ ಸಭೆಗೆ ಬಂದಿದ್ದೇನೆ ಎಂದರು ಶೃತಿ.
ವಾಣಿಜ್ಯ ಮಂಡಳಿ ಮೇಲೆ ಅಷ್ಟೊಂದು ಗೌರವ ಇದ್ದವರು, ಸೋಷಿಯಲ್ ಮೀಡಿಯಾಗೆ ಹೋಗುವುದಕ್ಕೆ ಮೊದಲೇ ವಾಣಿಜ್ಯ ಮಂಡಳಿ ಎದುರು ಸಮಸ್ಯೆ ಹೇಳಿಕೊಳ್ಳಬೇಕಿತ್ತಲ್ಲವೇ.. ಎಂದು ಪ್ರಶ್ನಿಸಿದರು ಪತ್ರಕರ್ತರು. ಶೃತಿ ದಢಕ್ಕನೆ ಎದ್ದು ಹೋದರು.