ಗಂಡ ಹೆಂಡತಿ ಗಲಾಟೆ ಸಂಜನಾ ಅವರ ಆಸ್ತಿಯ ಲೆಕ್ಕವನ್ನೂ ಕೇಳಿದೆ. ನಾನು ಕೇವಲ ಎರಡೂವರೆ ಲಕ್ಷಕ್ಕಾಗಿ ಗಂಡ ಹೆಂಡತಿ ಸಿನಿಮಾ ಒಪ್ಪಿಕೊಂಡೆ ಎಂದಿದ್ದ ಸಂಜನಾಗೆ, ಈಗ ನಿಮ್ಮ ಬಳಿ ಇರುವ ಆಸ್ತಿ ಎಷ್ಟು ಕೋಟಿ..? ಎರಡೂವರೆ ಲಕ್ಷ ಸಂಭಾವನೆ ಪಡೆಯುತ್ತಿದ್ದ ನೀವು, ಇಷ್ಟು ಕೋಟಿ ಆಸ್ತಿ ಮಾಡಿದ್ದು ಹೇಗೆ..? ಐಟಿ ರಿಟನ್ರ್ಸ್ ಸಲ್ಲಿಸಿದ್ದೀರಾ..? ನಿಮ್ಮ ಬಳಿ ಜಾಗ್ವಾರ್ ಇದೆ. ನನ್ನ ಬಳಿ ಮಾರುತಿ ಬಲೆನೋ ಇದೆ. ನೀವು ಬಂಗಲೆ ಕಟ್ಟಿದ್ದೀರಿ. ನಾನಿನ್ನೂ 8 ಸಾವಿರ ರೂ. ಬಾಡಿಗೆ ಮನೆಯಲ್ಲಿದ್ದೇನೆ ಎಂದಿದ್ದಾರೆ ರವಿ ಶ್ರೀವತ್ಸ.
ಇದಕ್ಕೆ ತಿರುಗೇಟು ನೀಡಿರುವ ಸಂಜನಾ, ನನ್ನ ಬಳಿ ಜಾಗ್ವಾರ್ ಅಷ್ಟೇ ಅಲ್ಲ, ಬಿಎಂಡಬ್ಲ್ಯು, ಹುಂಡೈ ವರ್ನಾ ಕಾರ್ಗಳೂ ಸೇರಿ ಐದಾರು ಕಾರುಗಳಿವೆ. ಚೆನ್ನೈನಲ್ಲಿ ಮನೆ ಇದೆ. ಇಂದಿರಾನಗರದಲ್ಲಿ ಮನೆ ಇದೆ. ಹೆಬ್ಬಾಳದಲ್ಲಿ ಸ್ವಂತ ಮನೆ ಇದೆ. ರಾಜಾನುಕುಂಟೆಯಲ್ಲಿ ಸೈಟ್ ಇದೆ. ಹೈದರಾಬಾದ್ನಲ್ಲಿ ಕೆಲವು ಸೈಟುಗಳಿವೆ. ಎಲ್ಲದಕ್ಕೂ ನನ್ನ ಬಳಿ ಐಟಿ ರಿಟನ್ರ್ಸ್ ದಾಖಲೆ ಇದೆ ಎಂದಿದ್ದಾರೆ ಸಂಜನಾ.
ಅಷ್ಟೇ ಅಲ್ಲ, ಬಿಗ್ಬಾಸ್ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಜನಾ ಅವರಿಗೆ 20 ಲಕ್ಷ ರೂ. ಸಂಭಾವನೆ ನೀಡಲಾಗಿತ್ತಂತೆ. ಸಂಜನಾ, ಈಗ ಒಂದು ದಿನಕ್ಕೆ ಒಂದೂವರೆ ಲಕ್ಷ ರೂಪಾಯಿ ದುಡಿಯುತ್ತಾರಂತೆ. ಅವರು ತಮ್ಮ ಸ್ಟಾಫ್ಗೆ ಕೊಡುವ ಸಂಬಳವೇ ದಿನಕ್ಕೆ 14 ಸಾವಿರ ರೂಪಾಯಿಯಂತೆ. ಇದೆಲ್ಲವನ್ನೂ ಸಂಜನಾ ಅವರೇ ಹೇಳಿಕೊಂಡಿದ್ದಾರೆ.