` ಶೃತಿ ಮೀಟೂ ಏಟಿಗೆ ಐಶ್ವರ್ಯಾ ಸರ್ಜಾ ತಿರುಗೇಟು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
aishwarya sarja questions sruthi hariharan
Sruthi Hariharan, Aishwarya Sarja

ಅರ್ಜುನ್ ಸರ್ಜಾ ಕಿರುಕುಳ ನೀಡಿದ್ದ ಎಂಬ ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ತಿರುಗೇಟು ಕೊಟ್ಟಿದ್ದಾರೆ. ನನ್ನ ತಂದೆ ಏನೆಂದು ನನಗೆ ಗೊತ್ತಿದೆ. ಅವರು ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಾರೆ ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಐಶ್ವರ್ಯ. 

ಹೀಗೆ ಹೇಳುವ ಐಶ್ವರ್ಯ ಶೃತಿಗೆ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಘಟನೆ ಆದ ದಿನ ಶೃತಿ ಮಾತನಾಡಿಲ್ಲ. ಪ್ರತಿಭಟಿಸಿಯೂ ಇಲ್ಲ. ದೂರನ್ನೂ ಕೊಟ್ಟಿಲ್ಲ. ಅಲ್ಲದೆ ಚಿತ್ರದ ಪ್ರೀಮಿಯರ್ ಶೋನಲ್ಲಿ ನನಗೆ ಸಿಕ್ಕಾಗ ಶೃತಿ ಐಶ್ವರ್ಯ ಬಳಿ ``ನಿಮ್ಮ ತಂದೆ ಲೆಜೆಂಡ್. ಸೂಪರ್ ಸ್ಟಾರ್. ಅವರ ಜೊತೆ ಇನ್ನೂ ಹೆಚ್ಚು ಸಿನಿಮಾ ಮಾಡಬೇಕು'' ಎಂದು ಹೇಳಿಕೊಂಡಿದ್ದರು. ಅಷ್ಟೆಲ್ಲ ಕೆಟ್ಟ ಅನುಭವವಾಗಿದ್ದರೆ, ನನ್ನ ಬಳಿ ಆ ರೀತಿ ಏಕೆ ಹೇಳಬೇಕಿತ್ತು..? ಇದು ಐಶ್ವರ್ಯ ಸರ್ಜಾ ಕೇಳುತ್ತಿರುವ ಪ್ರಶ್ನೆ. ಅಷ್ಟೆ ಅಲ್ಲ, ಅದೇ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದ ಶೃತಿ ಹರಿಹರನ್ ಮಾತುಗಳೂ ಕೂಡಾ ಈಗ ಶೃತಿಯ ವಾದವನ್ನು ಒಪ್ಪದೇ ಇರುವವರ ಪ್ರಶ್ನೆಗೆ ಕಾರಣವಾಗಿವೆ.