ವಿಕ್ಟರಿ 2 ಚಿತ್ರ ತಂಡಕ್ಕೆ ಧ್ರುವ ಸರ್ಜಾ ಸೇರ್ಪಡೆಯಾಗಿದ್ದಾರೆ. ನಟನಾಗಿ ಅಲ್ಲ, ಕಂಠದಾನ ಕಲಾವಿದನಾಗಿ. ಶರಣ್ ಅಭಿನಯದ ವಿಕ್ಟರಿ2 ಸಿನಿಮಾದ ಪಾತ್ರಧಾರಿಗಳನ್ನು ಹಿನ್ನೆಲೆಯಲ್ಲಿ ಪರಿಚಯಿಸುವುದು ಧ್ರುವ ಸರ್ಜಾ. ಕೆಲವು ದೃಶ್ಯಗಳ ಹಿನ್ನೆಲೆಗೂ ಧ್ರುವ ಸರ್ಜಾ ವಾಯ್ಸ್ ಓವರ್ ನೀಡಲಿದ್ದಾರೆ.
ಶರಣ್ ಜೊತೆ ಅಪೂರ್ವ, ಅಸ್ಮಿತಾ ಸೂದ್ ಜೋಡಿಯಾಗಿ ನಟಿಸುತ್ತಿದ್ದಾರೆ. ರವಿಶಂಕರ್, ತಬಲಾ ನಾಣಿ, ಸಾಧು ಕೋಕಿಲ, ಪ್ರಶಾಂತ್ ಸಿದ್ಧಿ ಮೊದಲಾದವರ ದೊಡ್ಡ ತಂಡವೇ ಚಿತ್ರದಲ್ಲಿದೆ. ಹರಿ ಸಂತೋಷ್ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ.