ನನ್ನನ್ನು ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆಸಿಕೊಂಡರು. ಬಲವಂತವಾಗಿ ತಬ್ಬಿದರು. ಮೈಮೇಲೆ ಕೆಟ್ಟದಾಗಿ ಕೈ ಆಡಿಸಿದ್ರು. ರೆಸಾರ್ಟ್‍ಗೆ ಕರೆದರು ಅನ್ನೊದು ಶೃತಿ ಹರಿಹರನ್ ಆರೋಪ. ಈ ಕುರಿತು ಅರ್ಜುನ್ ಸರ್ಜಾ ಬೆನ್ನಿಗೆ ನಿಂತಿರೋದು ಅವರ ಕುಟುಂಬ. ಧ್ರುವ ಸರ್ಜಾ ಅಂತೂ ಕೆಂಡಾಮಂಡಲವಾಗಿ ಹೋಗಿದ್ದಾರೆ.
ನಾನು ಚಿಕ್ಕ ವಯಸ್ಸಿನಿಂದ ನನ್ನ ಅಂಕಲ್‍ನನ್ನು ನೋಡಿಕೊಂಡೇ ಬಂದಿದ್ದೇನೆ. ಅವರೇನು ಅನ್ನೋದು ನನಗೆ ಚೆನ್ನಾಗಿ ಗೊತ್ತು. ನಾಯಿ, ನರಿ, ಕ್ರಿಮಿ, ಕೀಟಗಳು ಹೇಳಿದ್ದನ್ನೆಲ್ಲ ಕೇಳುವ ಅಗತ್ಯ ನನಗಿಲ್ಲ. ನಮಗೆ ಹೀಗೆಲ್ಲ ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಆಡೋಕೆ ಬರಲ್ಲ. ಆಕೆಯ ಹಿಂದೆ ಯಾರಿದ್ದಾರೋ.. ಅವರು ಇರುವ ಜಾಗಕ್ಕೆ ನಾನು ಒಬ್ಬನೇ ಹೋಗ್ತೀನಿ. ಅದೇನಾಗುತ್ತೋ ನೋಡೇ ಬಿಡೋಣ. ಕೈ ಕೈ ಮಿಲಾಯಿಸಿಬಿಡೋಣ ಎಂದಿದ್ದಾರೆ ಧ್ರುವ ಸರ್ಜಾ.