` ಗೋಕರ್ಣದ ಪಾರ್ವತಿಯಾದಳು ಪಾರುಲ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
butterfly image
butterfly actress parul yadav

ಪಾರುಲ್ ಯಾದವ್, ಕನ್ನಡಿಗರಿಗೆ ಪ್ಯಾರ್‍ಗೇ ಹುಡುಗಿ ಎಂದೇ ಚಿರಪರಿಚಿತ. ಅವರೀಗ ಪಾರ್ವತಿಯಾಗಿದ್ದಾರೆ. ಗೋಕರ್ಣದ ಚೆಲುವೆಯಾಗಿದ್ದಾರೆ. ಬಟರ್‍ಫ್ಲೈ ಚಿತ್ರಕ್ಕಾಗಿ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ ಚಿತ್ರದ ರೀಮೇಕ್, ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲೂ ಚಿತ್ರೀಕರಣಗೊಂಡಿದೆ. ಪ್ರತಿ ಭಾಷೆಯಲ್ಲೂ ಪ್ರತ್ಯೇಕ ನಾಯಕಿಯರು. ಕನ್ನಡದಲ್ಲಿ ಪಾರುಲ್. ಅವರು ಚಿತ್ರದ ನಿರ್ಮಾಪಕಿಯೂ ಹೌದು.

ಚಿಟ್ಟೆಗಳ ನಡುವೆ ಸಂಭ್ರಮಿಸುತ್ತಿರುವ ಪಾರುಲ್ ಯಾದವ್‍ರ ಫಸ್ಟ್‍ಲುಕ್ ನಮ್ಮ ನಿಮ್ಮ ನಡುವಿನ ಮುದ್ದು ಮುಖದ ಹುಡುಗಿಯಂತೆ ಕಾಣುತ್ತಿದೆ. ಈ ಪಾರ್ವತಿ ನಗಿಸುತ್ತಾಳೆ.. ಅಳಿಸುತ್ತಾಳೆ.. ಮಂದಹಾಸದಲ್ಲಿ ಮುಳುಗಿಸುತ್ತಾಳೆ.. ನನ್ನ ವೃತ್ತಿ ಬದುಕಿನಲ್ಲೇ ಇದು ನಾನು ಜೀವಿಸಿದ ಪಾತ್ರ ಎಂದು ಸಂಭ್ರಮಿಸುತ್ತಿದ್ದಾರೆ ಪಾರುಲ್. ಅಲ್ಲಲ್ಲ.. ಪಾರ್ವತಿ.