ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ, ಮಂಡ್ಯದ ಹೆಣ್ಣು. ಮಂಡ್ಯದಿಂದಲೇ ಸಂಸದೆಯಾಗಿದ್ದ ಅವರೀಗ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಹೇಳಿ ಕೇಳಿ ಮಂಡ್ಯ ಸಿಹಿ ಸಿಹಿಯಾದ ಕಬ್ಬು ಮತ್ತು ಸಕ್ಕರೆಗೆ ಫೇಮಸ್ಸು. ಈಗ ಆ ಕ್ಷೇತ್ರದ ಸಂಸದೆಯಾಗಿದ್ದ, ಮಂಡ್ಯದ ಹೆಣ್ಣು ಎಂದೇ ಖ್ಯಾತರಾಗಿದ್ದ ರಮ್ಯಾ, ಸಕ್ಕರೆಯನ್ನೇ ಬಿಟ್ಟುಬಿಟ್ಟಿದ್ದಾರಂತೆ.
ಸಕ್ಕರೆ ಅನ್ನೋದು ರಮ್ಯಾಗೆ ಅಡಿಕ್ಷನ್ ಆಗಿಬಿಟ್ಟಿತ್ತಂತೆ. ಒತ್ತಡ ಹೆಚ್ಚಾದಾಗಲೆಲ್ಲ ಸಿಹಿ ಅಥವಾ ಸಕ್ಕರೆ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರಂತೆ ರಮ್ಯಾ. ಸಕ್ಕರೆ ತಿನ್ನುವ ಚಟವನ್ನು ಬಿಡಬೇಕು ಎಂದುಕೊಂಡರೂ ಎರಡು ಮೂರು ದಿನಗಳಲ್ಲೇ ಮುರಿಯುತ್ತಿದ್ದರಂತೆ. ಅಷ್ಟರಮಟ್ಟಿಗೆ ಅಂಟಿಕೊಂಡಿರೋ ಚಟವನ್ನು ಬಿಡೋಕೆ ಪ್ರತಿಜ್ಞೆ ಮಾಡಿದ್ದಾರೆ ರಮ್ಯಾ.
ಅದಕ್ಕೇ ಈ ಬಾರಿ ಅವರು ಸಕ್ಕರೆ ತಿನ್ನುವುದನ್ನು ಬಿಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ಈ ವರ್ಷದ ಕೊನೆಯವರೆಗೆ ಸಕ್ಕರೆಯನ್ನು ಮುಟ್ಟೋದಿಲ್ಲ ಅನ್ನೊದು ರಮ್ಯಾ ಅವರ ಪ್ರತಿಜ್ಞೆ. ಈ ಶುಗರ್ ಚಾಲೆಂಜ್‍ನಲ್ಲಿ ರಮ್ಯಾ ಗೆಲ್ತಾರಾ..? ಜಸ್ಟ್ ವೇಯ್ಟ್ & ಸೀ.