` ಶೂಟಿಂಗ್ ಸಮಯದಲ್ಲೇ.. ಭರ್ಜರಿ ಭರಾಟೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
high demand for bharaate movie right
Srimurali Image from Bharate Movie

ಭರಾಟೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಚೇತನ್ ಕುಮಾರ್ ಕಾಂಬಿನೇಷನ್‍ನ ಸಿನಿಮಾ. ಸಿನಿಮಾದ ಶೂಟಿಂಗ್ ಬಿರುಸಾಗಿ ನಡೆಯುತ್ತಿರುವಾಗಲೇ ಚಿತ್ರಕ್ಕೆ ಪರಭಾಷೆಗಳಿಂದ ಡಿಮ್ಯಾಂಡ್ ಶುರುವಾಗಿದೆ. ಶ್ರೀಮುರಳಿ ಚಿತ್ರಕ್ಕೆ ಹಿಂದಿಯಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ. ಆದರೆ, ಈ ಬಾರಿ ಹಿಂದಿಯಷ್ಟೇ ಅಲ್ಲ, ಭೋಜ್‍ಪುರಿ (ಬಿಹಾರದ ಭಾಷೆ)ಯಲ್ಲೂ ಡಿಮ್ಯಾಂಡ್ ಶುರುವಾಗಿದೆ. ಹಿಂದಿ, ಭೋಜ್‍ಪುರಿ ಜೊತೆಗೆ ಉತ್ತರ ಭಾರತದ ಹಲವು ಭಾಷೆಗಳಲ್ಲೂ ಡಬ್ಬಿಂಗ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಜೊತೆಗೆ ನೆಟ್‍ಫ್ಲಿಕ್ಸ್, ಆಮೆಜಾನ್‍ನವರೂ ಸಿನಿಮಾ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರೆ.

ಸದ್ಯಕ್ಕೆ ಎಲ್ಲವೂ ಮಾತುಕತೆ ಹಂತದಲ್ಲಿದೆ. ಡಿಮ್ಯಾಂಡ್ ನೋಡಿ ಖುಷಿಯಾಗುತ್ತಿದೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದಾರೆ ಚೇತನ್. ನವೆಂಬರ್ 1ರಂದು ಚಿತ್ರದ ಟೀಸರ್ ಹೊರಬೀಳಲಿದೆ.

Geetha Movie Gallery

Adhyaksha In America Audio Release Images