` ಟೀಸರ್ ಬಿಟ್ಟ ಭಟ್ಟರು ನವೆಂಬರ್‍ಗೆ ಬರ್ತಾರೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
panchatantra first look
Panchatantra Movie Image

ಯೋಗರಾಜ್ ಭಟ್ಟರು ಮಾತನಾಡಿದರೆ, ಅಲ್ಲೊಂದಿಷ್ಟು ಪೋಲಿತನ, ತುಂಟತನ, ಫಿಲಾಸಫಿಗಳ ಜೊತೆ ತಲೆಗೆ ಸಣ್ಣದಾಗೊಂದು ಹುಳ ಬಿಟ್ಟಿರ್ತಾರೆ. ಆದರೆ, ಈ ಬಾರಿ ಅವರು ಸ್ಪೆಷಲ್ಲಾಗಿ ಟೀಸರ್ ಬಿಟ್ಟಿದ್ದಾರೆ. ಇದು ಪಂಚತಂತ್ರದ ಟೀಸರ್.

ವಿಹಾನ್, ಸೋನಾಲ್ ಮೊಂಟಾರಿಯೋ, ಅಕ್ಷರಾ ಗೌಡ, ರಂಗಾಯಣ ರಘು ಪ್ರಧಾನ ಪಾತ್ರದಲ್ಲಿರೋ ಚಿತ್ರ ಇದು.

ದೊಡ್ಡ ಗ್ಯಾಪ್‍ನ ನಂತರ ಮತ್ತೊಮ್ಮೆ ಹೊಸಬರ ಚಿತ್ರಕ್ಕೆ ಕೈ ಹಾಕಿರೋ ಭಟ್ಟರು, ಈ ಬಾರಿ ಕಾರ್ ರೇಸ್ ಎತ್ತಿಕೊಂಡಿದ್ದಾರೆ. ಟೀಸರ್‍ನಲ್ಲೆ ಮೈನವಿರೇಳಿಸುವ ದೃಶ್ಯ ತೋರಿಸಿರೋ ಭಟ್ಟರು, ಅದರ ನಡುವೆ ಒಂದು ನವಿರು ಪ್ರೇಮಕಥೆಯನ್ನೂ ಇಟ್ಟಿರೋದು ಂಚತಂತ್ರದ ಟೀಸರ್‍ನಲ್ಲಿ ಎದ್ದು ಕಾಣುತ್ತೆ.

ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್ ನಿರ್ಮಾಣದ ಚಿತ್ರ, ನವೆಂಬರ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ನವೆಂಬರ್‍ನಲ್ಲಿ ದೊಡ್ಡ ದೊಡ್ಡ ಚಿತ್ರಗಳ ಕ್ಯೂ ಇದೆ. ಇವುಗಳ ನಡುವೆ ಭಟ್ಟರ ಸಿನಿಮಾ ಕೂಡಾ ಬಂದ್ರೆ, ನವೆಂಬರ್ ನಕ್ಷತ್ರಗಳ ತಿಂಗಳಾಗಲಿದೆ.

Shivarjun Trailer Launch Gallery

Popcorn Monkey Tiger Movie Gallery