ದಿ ವಿಲನ್ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್. ಇದಕ್ಕೂ ಮೊದಲು ಜಾನ್ ಅಬ್ರಹಾಂ, ವಿಕ್ರಂ, ರಾಮ್‍ಚರಣ್ ತೇಜ, ಅಕ್ಷಯ್ ಕುಮಾರ್, ಪ್ರಭುದೇವ, ರಜನಿಕಾಂತ್‍ರಂತಹ ಸ್ಟಾರ್‍ಗಳ ಜೊತೆ ನಟಿಸಿರುವವರು. ಸೂಪರ್ ಸ್ಟಾರ್ ರಜನಿ ಜೊತೆ ನಟಿಸಿರುವ 2.0 ಇನ್ನೂ ರಿಲೀಸ್ ಆಗಬೇಕಿದೆ. ಮೂಲತಃ ಬ್ರಿಟನ್ನಿನವರಾದ ಆ್ಯಮಿ ಜಾಕ್ಸನ್ ಅವರನ್ನು ಆಯ್ಕೆ ಮಾಡಿಕೊಳ್ಳೋಕೆ ಕಾರಣವೇ ಆಕೆಯ ಬ್ರಿಟಿಷ್ ಲುಕ್. ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಆ ಲುಕ್‍ನಿಂದಾಗಿಯೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಯ್ತು ಎಂದಿದ್ದಾರೆ ಪ್ರೇಮ್.
ಸೆಟ್‍ನಲ್ಲಿ ಸಿಂಪಲ್ ಆಗಿರುತ್ತಿದ್ದ ಆ್ಯಮಿ ಜಾಕ್ಸನ್, ಮೇಕಪ್ ಹಾಕಿಕೊಂಡ ಮೇಲೆ ಸೆಟ್ ಬಿಟ್ಟು ಕದಲುತ್ತಲೇ ಇರಲಿಲ್ಲವಂತೆ. ಕ್ಯಾರವಾನ್‍ಗೂ ಹೋಗದೆ ಸೆಟ್‍ನಲ್ಲಿದ್ದವರ ಜೊತೆ ಬೆರೆಯತ್ತಿದ್ದರಂತೆ ಆ್ಯಮಿ ಜಾಕ್ಸನ್.
ಲಂಗ ದಾವಣಿಯಲ್ಲೂ ಆ್ಯಮಿ ಜಾಕ್ಸನ್ ಚೆಂದ ಕಾಣಿಸ್ತಾರೆ ಎಂದಿರುವ ಪ್ರೇಮ್, ಮೈಸೂರಿನಲ್ಲಿ ಆ್ಯಮಿ ಜಾಕ್ಸನ್‍ಗೆ ಮೈಸೂರು ಪಾಕ್ ತಿನ್ನಿಸಿದ ಕಥೆ ಹೇಳಿಕೊಂಡು ನಗುತ್ತಾರೆ. ಸರಳತೆ ವಿಚಾರಕ್ಕೆ ಬಂದ್ರೆ, ಶಿವಣ್ಣ ಹೇಗೋ.. ಆ್ಯಮಿ ಜಾಕ್ಸನ್ ಕೂಡಾ ಹಾಗೆ ಅಂತಾರೆ ಪ್ರೇಮ್.
ಚಿತ್ರದ ಪ್ರಚಾರಕ್ಕೆ ಕೈ ಕೊಡುತ್ತಿದ್ದಾರೆ ಎಂದು ಬೇಸರಿಸಿಕೊಂಡಿದ್ದ ಪ್ರೇಮ್, ಆ್ಯಮಿ ಜಾಕ್ಸನ್ ಶೂಟಿಂಗ್ ವೇಳೆ ತುಂಬಾ ಕೋ ಆಪರೇಟ್ ಮಾಡಿದ್ದರು ಎನ್ನುವುದನ್ನು ಮರೆಯೋದಿಲ್ಲ.