` ಚಂದ್ರಮುಖಿ ಭಾವನಾಗೆ ಅಮೆರಿಕದಲ್ಲಿ ಪ್ರಶಸ್ತಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bhavana ramanna honored
Bhavana Ramanna Honored in America

ಚಂದ್ರಮುಖಿ ಎಂದೇ ಕನ್ನಡಿಗರ ಹೃದಯದಲ್ಲಿ ನೆಲೆ ನಿಂತಿರುವ ನಟಿ ಭಾವನಾ ರಾಮಣ್ಣ ಅಮೆರಿಕದಲ್ಲಿ ಮೇರಿಲ್ಯಾಂಡ್‍ನಲ್ಲಿ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಮೇರಿಲ್ಯಾಂಡ್ ಪ್ರಾಂತ್ಯದ ಗವರ್ನರ್ `ವರ್ಷದ ಭಾರತೀಯ ಅತ್ಯುತ್ತಮ ನಟಿ' ಪ್ರಶಸ್ತಿ ನೀಡಿ ಗೌರವಿಸಿದ್ರು. ಮೇರಿಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವನಾ ರಾಮಣ್ಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯ್ತು.

ತುಳು ಚಿತ್ರೋದ್ಯಮದಲ್ಲಿ ಚಿತ್ರಜೀವನ ಆರಂಭಿಸಿದ ಭಾವನಾ, ಚಂದ್ರಮುಖಿ ಪ್ರಾಣಸಖಿ, ನೀ ಮುಡಿದಾ ಮಲ್ಲಿಗೆ ಚಿತ್ರಗಳ ಮೂಲಕ ಹೆಸರು ಗಳಿಸಿದ ತಾರೆ. ಶಾಂತಿ ಚಲನಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಭಾವನಾ, ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿರುವ ನಟಿ. ನಾಟ್ಯ ಕಲಾವಿದೆಯೂ ಹೌದು. ಹೂವು ಪ್ರತಿಷ್ಟಾನದ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕನ್ನಡ ಕಲಾವಿದರನ್ನು ಪರಿಚಯಿಸುತ್ತಿದ್ದಾರೆ ಭಾವನಾ.

ಸುಧಾಕರ್ ಗಂದೆ ಅವರೊಂದಿಗೆ ಲೆಕ್ಸಿಕನ್ ಮೋಶನ್ ಪಿಕ್ಚರ್ಸ್ ಜೊತೆ ಹೋಂಟೌನ್ಸ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ನಿರುತ್ತರ ಸಿನಿಮಾ ನಿರ್ಮಿಸಿದ್ದ ಭಾವನಾ, ನಿರ್ಮಾಪಕಿಯೂ ಹೌದು. ಆಸ್ಕರ್ ಪುರಸ್ಕøತ ರಸೂಲ್ ಪೂಕುಟ್ಟಿಯವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕರೆತಂದವರು ಭಾವನಾ.

ಒಬ್ಬ ಕಲಾವಿದೆಯಾಗಿ ಕನ್ನಡ ಚಿತ್ರ ರಸಿಕರ ಹೃದಯ ಗೆದ್ದಿರುವ ಭಾವನಾ, ಈಗ ಅಮೆರಿಕದಲ್ಲಿ ಪ್ರತಿಷ್ಟಿತ ಪುರಸ್ಕಾರಕ್ಕೆ ಭಾಜನರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery