` ಬೆಂಗಳೂರು ಸರಣಿ ಸ್ಫೋಟದ ಸುತ್ತ ಟೆರರಿಸ್ಟ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the terrorist has drawn its inspiration from bangalore bomb blast
The Terrorist

2009ರಲ್ಲಿ ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಸರಣಿ ಸ್ಫೋಟ ಸಂಭವಿಸಿದ್ದವು. 2009-09 ಒಂದು ರೀತಿಯಲ್ಲಿ ಭಾರತಕ್ಕೆ ಭಯೋತ್ಪಾದನೆಯ ವರ್ಷ ಎಂದೇ ಹೇಳಬೇಕು. ಆ ವರ್ಷ, ಅಲಹಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮುಂಬೈ, ದೆಹಲಿ, ಹೈದರಾಬಾದ್.. ಹೀಗೆ ಹಲವೆಡೆ ಸರಣಿ ಸ್ಫೋಟ ಸಂಭವಿಸಿದ್ದವು. 

ಆಗ ಬೆಂಗಳೂರಿನಲ್ಲೂ ಗೋಪಾಲನ್ ಮಾಲ್, ಮಡಿವಾಳ, ನಾಯಂಡಹಳ್ಳಿ, ಪಂತರಪಾಳ್ಯ, ಅಡುಗೋಡಿ, ಕೋರಮಂಗಲದ ಈಗಲ್ ಸ್ಟ್ರೀಟ್, ಮಲ್ಯ ಆಸ್ಪತ್ರೆ, ಲಾಂಗ್‍ಫೋರ್ಡ್ ರಸ್ತೆ, ಸೇಂಟ್‍ಜಾನ್ ಆಸ್ಪತ್ರೆ ಬಸ್ ನಿಲ್ದಾಣ.. ಹೀಗೆ ಹಲವೆಡೆ ಬಾಂಬ್ ಸ್ಫೋಟಿಸಿದ್ದವು. ಇಬ್ಬರು ಮೃತಪಟ್ಟಿದ್ದರು. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಪ್ರಕರಣದ ಸುತ್ತಲೇ ಹೆಣೆದಿರುವ ಕಥೆ ದಿ ಟೆರರಿಸ್ಟ್.

ಸಿನಿಮಾದಲ್ಲಿ ರಾಗಿಣಿಯದ್ದು ರೇಷ್ಮಾ ಎನ್ನುವ ಮುಸ್ಲಿಂ ಹುಡುಗಿಯ ಪಾತ್ರ. ಇತ್ತೀಚೆಗೆ ಕನ್ನಡದಲ್ಲಿ ವಿಭಿನ್ನ ಪ್ರಯತ್ನಗಳಿಗೆ ಸಿಗುತ್ತಿರುವ ಪ್ರೋತ್ಸಾಹವೇ ಈ ಚಿತ್ರ ನಿರ್ದೇಶಿಸಲು ಪ್ರೇರಣೆ ನೀಡಿತು ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

ಮುಗ್ದ ಯುವತಿಯೊಬ್ಬಳು, ಸೇಡು ತೀರಿಸಿಕೊಳ್ಳುವ ಹುಡುಗಿಯಾಗಿ ಬದಲಾಗುತ್ತಾಳೆ. ಬಾಂಬ್ ಸ್ಫೋಟದ ತನಿಖೆ, ತಿರುವುಗಳನ್ನು ಭಾವನೆಗಳ ಮೂಲಕವೇ ಕಟ್ಟಿಕೊಡಲಾಗಿದೆ ಎಂದಿದ್ದಾರೆ ಶೇಖರ್. ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗುತ್ತಿದೆ.

The Terrorist Movie Gallery

Kumari 21 Movie Gallery