` ಮಲ್ಟಿಪ್ಲೆಕ್ಸ್ ವಿವಾದ - ನಿರ್ದೇಶಕ ಪ್ರೇಮ್ ಅಕ್ರೋಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
prem expresses his anger against multiplexes
Prem

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಬುಕಿಂಗ್ ಇಂದಿನಿಂದ ಶುರುವಾಗಲಿದೆ. ಶಿವಣ್ಣ-ಸುದೀಪ್ ಕಾಂಬಿನೇಷನ್‍ನ ಈ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ದೊಡ್ಡ ಬಜೆಟ್ ಚಿತ್ರವೂ ಆಗಿರೋದ್ರಿಂದ ಮಲ್ಟಿಪ್ಲೆಕ್ಸ್‍ಗಳಲ್ಲಿ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಷೇರು ಬದಲಾವಣೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು ನಿರ್ದೇಶಕ ಪ್ರೇಮ್. ಬೇರೆ ಭಾಷೆಯ ನಿರ್ಮಾಪಕರಿಗೆ ನೀಡುವಂತೆ ಕನ್ನಡ ನಿರ್ಮಾಪಕರಿಗೂ 60:40 ಷೇರು ನೀಡುವಂತೆ ಮನವಿ ಮಾಡಿದ್ದರು. ಈ ಕುರಿತು ಫಿಲಂ ಚೇಂಬರ್‍ನಲ್ಲಿ ಸಭೆಯನ್ನೂ ನಡೆಸಲಾಗಿತ್ತು.

ಆದರೆ, ಬುಕ್ಕಿಂಗ್ ಶುರುವಾಗುತ್ತಿದ್ದರೂ ಮಲ್ಟಿಪ್ಲೆಕ್ಸ್ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಸಭೆಯಲ್ಲಿ ಬಹುತೇಕ ಒಪ್ಪಿಕೊಂಡಂತೆ ಕಾಣಿಸಿದ್ದ ಮಲ್ಟಿಪ್ಲೆಕ್ಸ್ ಮಾಲೀಕರು ನಂತರ ಬೇರೆಯೇ ಮಾತನಾಡುತ್ತಿದ್ದಾರೆ. ಈ ಕುರಿತು ಆಕ್ರೋಶಗೊಂಡಿರುವ ನಿರ್ದೇಶಕ ಪ್ರೇಮ್, ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ಮನವಿ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery