` ಸಿಎಂ ಕುಮಾರಸ್ವಾಮಿ ಅಲ್ಲ.. ಸಿಎಂ ಸಿನಿಮಾಸ್ವಾಮಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mysore dasara film festival inauguration
CM HD Kumaraswamy Inaugurates Mysore Film Festival

ಮುಖ್ಯಮಂತ್ರಿ ಕುಮಾರಸ್ವಾಮಿ, ಸಿನಿಮಾ ಲೋಕದಿಂದಲೇ ರಾಜಕೀಯಕ್ಕೆ ಹೋದವರು. ಇಂದಿಗೂ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳೋ ಕುಮಾರಸ್ವಾಮಿ, ದಸರಾ ಚಲನಚಿತ್ರೋತ್ಸವ ಉದ್ಘಾಟನೆ ವೇಳೆಯಲ್ಲೂ ತಮ್ಮ ಸಿನಿಮಾ ಪ್ರೀತಿ ಬಿಚ್ಚಿಟ್ಟಿದ್ದಾರೆ. ಯುವಕರಾಗಿದ್ದಾಗ ಅವರು ಮೂರೂವರೆ ವಜ್ರಗಳು ಚಿತ್ರವನ್ನು ಒಂದೇ ದಿನ ಎರಡು ಶೋ ನೋಡಿದ್ದರಂತೆ. ಜೇಬಲ್ಲಿದ್ದ ದುಡ್ಡು ಖಾಲಿಯಾಗಿ ಹಾಸನದಿಂದ ಹೊಳೆ ನರಸೀಪುರಕ್ಕೆ ನಡೆದುಕೊಂಡೇ ಹೋಗಿದ್ದರಂತೆ. ಬಂಗಾರದ ಮನುಷ್ಯ ಚಿತ್ರವನ್ನು 100ಕ್ಕೂ ಹೆಚ್ಚು ಸಲ ನೋಡಿದ್ದೇನೆ ಎಂದು ಹೇಳಿಕೊಂಡ ಸಿಎಂ, ರಾಜ್‍ಕುಮಾರ್ ಅವರ ಚಿತ್ರಗಳೇ ನನ್ನ ಸಿನಿಮಾ ಪ್ರವೇಶಕ್ಕೆ ಪ್ರೇರಣೆ ಎಂದು ಹೆಮ್ಮೆಯಿಂದ ಹೇಳಿಕೊಂಡ್ರು.

ನಾನು ಈಗಲೂ ಕನ್ನಡ ಚಿತ್ರರಂಗದ ಡಿಕ್ಷನರಿ ಇದ್ದಂತೆ. ನನಗೆ ಹಳೆ ಸಿನಿಮಾದ ಹಡು, ದೃಶ್ಯ, ಸನ್ನಿವೇಶಗಳೂ ನೆನಪಿವೆ. ಯಾವ್ಯಾವ ಸಿನಿಮಾ ಎಷ್ಟೆಷ್ಟು ಗಳಿಸಿತು ಎಂದು ಹೇಳಬಲ್ಲೆ ಎಂದು ಆತ್ಮಿವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ಜೊತೆಯಲ್ಲೇ ಈಗಿನ ಚಿತ್ರಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ, ಲಾಂಗು ಮಚ್ಚುಗಳ ಕ್ರೌರ್ಯಕ್ಕೆ ಕಡಿವಾಣ ಹಾಕಿ. ಸಿನಿಮಾಗಳು ಜನರನ್ನು ಹೆಚ್ಚು ಪ್ರಭಾವಿಸುತ್ತವೆ ಎಂದು ಮನವಿ ಮಾಡಿದ್ದಾರೆ.

ಅಂದಹಾಗೆ ಕಾರ್‍ನಲ್ಲಿ ಹೋಗುವಾಗ ಇಂದಿಗೂ ಕುಮಾರಸ್ವಾಮಿ ಹಳೆಯ ಹಾಡುಗಳನ್ನು ಕೇಳುತ್ತಾರಂತೆ. ಹಲವು ಹಾಡುಗಳು ಅವರಿಗೆ ಬಾಯಿಪಾಠವಾಗಿವೆಯಂತೆ. ಅದಕ್ಕೇ ಹೇಳಿದ್ದು, ನಮ್ಮ ಸಿಎಂ ಕುಮಾರಸ್ವಾಮಿಯೂ ಹೌದು. ಸಿನಿಮಾ ಸ್ವಾಮಿಯೂ ಹೌದು.

Adachanege Kshamisi Teaser Launch Gallery

Mataash Movie Gallery