ರಾಜಕುಮಾರ ನಂತರ ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಆನಂದ್‍ರಾಮ್ ಮತ್ತೊಮ್ಮೆ ಪುನೀತ್ ರಾಜ್‍ಕುಮಾರ್ ಜೊತೆ ಸೇರಿರುವ ಸಿನಿಮಾದ ಬಗ್ಗೆ ಅಕ್ಟೋಬರ್ 10ಕ್ಕೆ ಗುಡ್‍ನ್ಯೂಸ್ ಎಂದಿದ್ದ ಚಿತ್ರತಂಡ, ಈಗ ನವೆಂಬರ್ 1ರ ರಾಜ್ಯೋತ್ಸವದ ದಿನ ಗುಡ್‍ನ್ಯೂಸ್ ಎಂದಿದೆ. ನವೆಂಬರ್ 1ನೇ ತಾರೀಕು, ಅಭಿಮಾನಿ ದೇವರಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆ.
ಅಕ್ಟೋಬರ್ 10ರಂದೇ ಟೈಟಲ್ ಗೊತ್ತಾಗಲಿದೆ ಎಂದು ಕಾಯುತ್ತಿದ್ದವರಿಗೆ ಚಿತ್ರತಂಡ ಇನ್ನೂ ಒಂದು ತಿಂಗಳು ಕಾಯುವಿಕೆಯ ಮುಹೂರ್ತವಿಟ್ಟಿದೆ. ಆ ದಿನ ಅಭಿಮಾನಿಗಳಿಂದ.. ಅಭಿಮಾನದಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆಯಂತೆ. ಕ್ಲೂ ಸಿಕ್ತಾ..?