` ಕಿರುತೆರೆಗೆ ಕಾಲಿಟ್ಟಳು ಮುಗುಳುನಗೆ ಸುಂದರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ashika ranganah in a guest role
Ashika Ranganath

ಮುಗುಳುನಗೆ ಸುಂದರಿ, ಚುಟು ಚುಟು ಚೆಲುವೆ ಆಶಿಕಾ ರಂಗನಾಥ್, ಕಿರುತೆರೆಗೆ ಕಾಲಿಟ್ಟಿದ್ದಾರೆ. ಸರ್ವ ಮಂಗಳ ಮಾಂಗಲ್ಯೆ ಎಂಬ ಧಾರಾವಾಹಿಯಲ್ಲಿ ನಟಿಸಲು ಓಕೆ ಎಂದಿದ್ದಾರೆ. ಅಂದಹಾಗೆ ಅದು ಪೂರ್ಣ ಪ್ರಮಾಣದ ಧಾರಾವಾಹಿಯ ಪಾತ್ರವಲ್ಲ. ಅತಿಥಿ ಪಾತ್ರವಷ್ಟೆ.

ಧಾರಾವಾಹಿಯ ಕಥೆಗೊಂದು ಟ್ವಿಸ್ಟ್ ನೀಡುವ ಪಾತ್ರ ನನ್ನದು ಎಂದಿರುವ ಆಶಿಕಾ, ಚುಟು ಚುಟು ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದಾರಂತೆ. ಧಾರಾವಾಹಿ ಶೂಟಿಂಗ್ ವೇಗವಾಗಿ ಮುಗಿಯುವುದನ್ನು ನೋಡಿಯೇ ಥ್ರಿಲ್ಲಾದೆ ಎನ್ನುವ ಆಶಿಕಾ ರಂಗನಾಥ್, ದಸರಾ ವೇಳೆಯ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.