ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ರಾಮಾಚಾರಿ, ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ರಾಮ್, ರಾಜಕುಮಾರ ಖ್ಯಾತಿಯ ಹೊಂಬಾಳೆ ಪ್ರೊಡಕ್ಷನ್ಸ್ನ ಹೊಸ ಚಿತ್ರದ ಟೈಟಲ್ ಏನೆಂದು ಗೊತ್ತಾಗುವ ಕಾಲ ಕೂಡಿ ಬಂದಿದೆ. ಅಕ್ಟೋಬರ್ 10ಕ್ಕೆ ಚಿತ್ರದ ಟೈಟಲ್ ಬಿಡುಗಡೆಯಾಗುತ್ತಿದೆ. ಇದನ್ನು ಸ್ವತಃ ನಿರ್ದೇಶಕ ಸಂತೋಷ್ ಆನಂದ್ರಾಮ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಪುನೀತ್, ನಟಸಾರ್ವಭೌಮ ಚಿತ್ರದ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ನಟಸಾರ್ವಭೌಮ ರಿಲೀಸ್ ಹೊತ್ತಿಗೆ ಹೊಸ ಚಿತ್ರದ ಚಿತ್ರೀಕರಣವೂ ಶುರುವಾಗುವ ನಿರೀಕ್ಷೆ ಇದೆ.