ರಾಜಕಾರಣಕ್ಕೆ ಹೋಗಿ, ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಮಾಜಿ ನಟಿಯೇ ಆಗಿಹೋಗಿದ್ದ ರಮ್ಯಾ, ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ.
ಈ ಸುದ್ದಿ ನಿಜವೇ ಆಗಿಬಿಟ್ಟರೆ, ದತ್ತ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿದ್ದ ರಮ್ಯಾ, 12 ವರ್ಷಗಳ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್‍ಗೆ ನಾಯಕಿಯಾಗುತ್ತಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನಲ್ಲಿ ಬೊಂಬಾಟ್ ಚಿತ್ರದ ನಾಯಕಿಯಾಗಿದ್ದ ರಮ್ಯಾ, ರಾಕ್‍ಲೈನ್ ಅವರ ಬೀಗರಾದ ಮುನಿರತ್ನ ಅವರ ಕಠಾರಿವೀರ ಸುರುಸುಂದರಾಂಗಿ ಚಿತ್ರದಲ್ಲಿ ಸುರಸುಂದರಿಯಾಗಿ ಕಾಣಿಸಿಕೊಂಡಿದ್ದರು. ಮುನಿರತ್ನ ಕಾಂಗ್ರೆಸ್ ಶಾಸಕರು. ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಹೀಗಾಗಿ ರಮ್ಯಾ ಮತ್ತೆ ಬಂದರೂ ಅಚ್ಚರಿಯಿಲ್ಲ.
ರಮ್ಯಾ ಅಭಿನಯದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ನಾಗರಹಾವು. ಆ ಚಿತ್ರದಲ್ಲಿ ನಾಗಕನ್ನಿಕೆಯಾಗಿ ಕಾಣಿಸಿಕೊಂಡಿದ್ದ ರಮ್ಯಾ, ಮದಕರಿ ನಾಯಕಿಯಾಗ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.