ರಾಗಿಣಿ ದ್ವಿವೇದಿ. ಮಾಸ್ ಹುಡುಗಿ. ಗ್ಲಾಮರ್ ಬೆಡಗಿ. ಒಳ್ಳೆಯ ನಟಿ. ಆದರೆ, ಇದುವರೆಗೆ ನಟಿಸಿದ್ದೆಲ್ಲ ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿ. ಇದೇ ಮೊದಲ ಬಾರಿಗೆ ಕಮರ್ಷಿಯಲ್ ಹಾಗೂ ಆರ್ಟ್ ಸಿನಿಮಾದ ಹಾಗಿರುವ ಬ್ರಿಡ್ಜ್ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಟೆರರಿಸ್ಟ್ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಚಿತ್ರದ ಪ್ರಧಾನ ಆಕರ್ಷಣೆ ರಾಗಿಣಿ.
ಸಿನಿಮಾದಲ್ಲಿ ರಾಗಿಣಿಯದ್ದು ರೇಷ್ಮಾ ಅನ್ನೋ ಮುಸ್ಲಿಂ ಹುಡುಗಿಯ ಪಾತ್ರ. ಹಾಗಂತ ಆಕೆ ಟೆರರಿಸ್ಟ್ ಅಲ್ಲ. ಭಯೋತ್ಪಾದನೆ ಸಬ್ಜೆಕ್ಟ್ ಇದ್ದರೂ, ಅದು ಯಾವುದೇ ಧರ್ಮಕ್ಕೆ ಕನೆಕ್ಟ್ ಆಗುವುದಿಲ್ಲ. ರೇಷ್ಮಾ ಎನ್ನುವವಳು ಚಿತ್ರದಲ್ಲಿ ಮುಗ್ಧ ಹುಡುಗಿ.
ಇಲ್ಲಿ ರೇಷ್ಮಾ ಅಮಾಯಕಿಯಾ..? ವ್ಯವಸ್ಥೆ ವಿರುದ್ಧ ಸಿಡಿದೇಳುತ್ತಾಳಾ..? ಈ ಎಲ್ಲದಕ್ಕೂ ಉತ್ತರ ಬೇಕೆಂದರೆ ನೀವು ಸಿನಿಮಾವನ್ನೇ ನೋಡಬೇಕು ಅಂತಾರೆ ರಾಗಿಣಿ.
ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ ಇದೇ 18ನೇ ತಾರೀಕು ತೆರೆ ಕಾಣುತ್ತಿದೆ.