ಚುಟು ಚುಟು ಅಂತೈತಿ ಹಾಡಿನ ಮೂಲಕ ಪಡ್ಡೆಗಳ ಮೈ ಬಿಸಿಯೇರಿಸಿತ್ತು ಶರಣ್-ಅಶಿಕಾ ರಂಗನಾಥ್ ಜೋಡಿ. ಈಗ ಶರಣ್ ಕುಟು ಕುಟು ಎನ್ನುತ್ತಾ ಬಂದಿದ್ದಾರೆ. ಅಶಿಕಾ ಬದಲಿಗೆ, ಅಪೂರ್ವ ಜೊತೆಯಾಗಿದ್ದಾರೆ. ಕುಟ್ಟಿ ಕುಟ್ಟಿ ಕುಟ್ಟಪ್ಪ ಅಂತ.. ಅನ್ನೋ ಉ.ಕರ್ನಾಟಕದ ಗೀತೆ ನೆನಪಿಸುವಂತೆ ವಿಕ್ಟರಿ 2ನ ಈ ಹಾಡು ಮೂಡಿ ಬಂದಿದೆ.
ರಷ್ಯಾದಲ್ಲಿ ಶೂಟಿಂಗ್ ಆಗಿರುವ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ ಶರಣ್ ಮತ್ತು ಅಪೂರ್ವ. ಈ ಹಾಡಿಗೂ ಒನ್ಸ್ ಎಗೇಯ್ನ್, ಅರ್ಜುನ್ ಜನ್ಯ ಸಂಗೀತ ನಿರ್ದೇಶಕ. ಹಾಡಿರುವುದು ಶಬೀರ್ ಮತ್ತು ಶಮಿತಾ ಮಲ್ನಾಡ್.
ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ ಅಲೆಮಾರಿ ಸಂತು ಅಲಿಯಾಸ್ ಹರಿ ಸಂತೋಷ್ ನಿರ್ದೇಶನವಿದೆ. ಕಾಲೇಜ್ ಕುಮಾರ ನಂತರ ಹರಿ ನಿದೇಶಿಸುತ್ತಿರುವ ಸಿನಿಮಾ ವಿಕ್ಟರಿ 2. ರ್ಯಾಂಬೋ 2 ನಂತರ ಶರಣ್ ಅಭಿನಯಿಸಿರುವ ಸಿನಿಮಾ ವಿಕ್ಟರಿ 2. ಮಾಸ್ ಲೀಡರ್ ನಂತರ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ವಿಕ್ಟರಿ 2. ನವೆಂಬರ್ 1ಕ್ಕೆ ರಾಜ್ಯೋತ್ಸವದ ಉಡುಗೊರೆಯಾಗಿ ತೆರೆಗೆ ಬರುತ್ತಿದೆ ವಿಕ್ಟರಿ 2.