` ಹದಿಹರೆಯದ ತಲ್ಲಣವೇ.. ನಡುವೆ ಅಂತರವಿರಲಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
naduve antharavirali is young hearts love story
Naduve Antharavirali

ನಡುವೆ ಅಂತರವಿರಲಿ. ಇದು ಹೊಸಬರ ಸಿನಿಮಾ. ಯುವ ಮನಸ್ಸುಗಳ ಸಿನಿಮಾ. ಇದೇ ವಾರ ತೆರೆಕಾಣುತ್ತಿರುವ ನಡುವೆ ಅಂತರವಿರಲಿ ಚಿತ್ರದಲ್ಲಿರೋದು ಹದಿಹರೆಯದ ಪ್ರೇಮ, ತಲ್ಲಣಗಳ ಕಥೆ. ಬೃಂದಾ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ. ಸಿನಿಮಾದ ಕಥೆ ಹಾಗೂ ಅದನ್ನು ಹೇಳಿರುವ ರೀತಿ ವಿಭಿನ್ನವಾಗಿದೆ. 

ಸಿನಿಮಾಗೆ ವಾಸ್ತು ಪ್ರಕಾರ ಖ್ಯಾತಿಯ ಐಶಾನಿ ಶೆಟ್ಟಿ ನಾಯಕಿ. ಉಳಿದಂತೆ ಸಿನಿಮಾದ ನಿರ್ದೇಶಕ ರವೀಣ್ ಹೊಸ ಪ್ರತಿಭೆ. ಚಿತ್ರದ ನಾಯಕ ಪ್ರಖ್ಯಾತ್ ಪರಮೇಶ್ ಕೂಡಾ ಯುವ ಪ್ರತಿಭೆ. ಪೋಸ್ಟರ್‍ನಲ್ಲಿ ಎದ್ದು ಕಾಣೋದು ಮುದ್ದು ಮುದ್ದು ಮುಖದ ಹುಡುಗ.. ಮುದ್ದು ಮುದ್ದು ಹುಡುಗಿ ಐಶಾನಿ.

ಮಣಿಕಾಂತ್ ಕದ್ರಿ ನಿರ್ದೇಶನದ ಹಾಡುಗಳು ಬೇರೆಯೇ ಫೀಲ್ ಕೊಟ್ಟಿವೆ. ಮಾಧುರ್ಯ ತುಂಬಿದ ಗೀತೆಗಳು ಪ್ರೀತಿಸುವ ಹೃದಯಗಳಿಗೆ ಇಷ್ಟವಾಗಿವೆ. ಎಷ್ಟೆಂದರೂ ಹದಿಹರೆಯದ ಪ್ರೀತಿ, ಉನ್ಮಾದ, ತಲ್ಲಣಗಳ ಪ್ರೇಮಕಥೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery