ದಿ ಟೆರರಿಸ್ಟ್. ಪಿ.ಸಿ.ಶೇಖರ್ ನಿರ್ದೇಶನದ ಸಿನಿಮಾ. ರಾಗಿಣಿ ದ್ವಿವೇದಿ ಹೀರೋ ಕಮ್ ಹೀರೋಯಿನ್ ಆಗಿ ನಟಿಸಿರುವ ಚಿತ್ರ. ಅಕ್ಟೋಬರ್ 18ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿರೋದು ಮುಂಬೈ ತಾಜ್ ಹೋಟೆಲ್ ಸ್ಫೋಟ ಹಾಗೂ ಬೆಂಗಳೂರು ಸರಣಿ ಸ್ಫೋಟದ ಹಿಂದಿನ ಕಥೆಗಳು.
ರಿಯಲ್ ಕಥೆಯೊಂದನ್ನಿಟ್ಟುಕೊಂಡು ಜಾಲಾಡಲು ಹೊರಟಾಗ, ಒಂದಿಷ್ಟು ರೋಚಕ ಅಂಶಗಳು ಸಿಕ್ಕವು. ಅವುಗಳನ್ನೇ ಇಟ್ಟುಕೊಂಡು ಏಕೆ ಸಿನಿಮಾ ಮಾಡಬಾರದು ಎಂದುಕೊಂಡು ಕಥೆ ಸಿದ್ಧಪಡಿಸಿದೆವು. ನಂತರ ಮಿಲಿಟರಿ ಅಧಿಕಾರಿಗಳಿಂದಲೂ ಸಲಹೆ, ಸೂಚನೆ ಪಡೆದವು. ಮಿಲಿಟರಿ ಅಧಿಕಾರಿಗಳು ಹೇಳಿದ ಅಂಶಗಳು ಚಿತ್ರದ ಕಥೆ ಮತ್ತು ಚಿತ್ರಕಥೆಗೆ ಬಹಳಷ್ಟು ಸಹಕಾರಿಯಾದವು ಎಂದಿದ್ದಾರೆ ಪಿ.ಸಿ.ಶೇಖರ್.
ಆರ್ಮಿ ಆಫೀಸರುಗಳನ್ನಷ್ಟೇ ಅಲ್ಲ, ಹಲವು ಮುಸ್ಲಿಂ ಕುಟುಂಬಗಳನ್ನೂ ಭೇಟಿ ಮಾಡಿ, ಮುಸ್ಲಿಮರ ರೀತಿ ರಿವಾಜು, ನಮಾಜುಗಳನ್ನೆಲ್ಲ ಅಧ್ಯಯನ ಮಾಡಿದ್ದಾರೆ. ಯಾರ ಮನಸ್ಸಿಗೂ ನೋವಾಗದಂತ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ ಅನ್ನೋದು ಪಿ.ಸಿ.ಶೇಖರ್ ಮಾತು.