` ಲಕ್ಷ್ಮಿಗೆ ಡಾ.ರಾಜ್, ಎಸ್.ನಾರಾಯಣ್‍ಗೆ ಪುಟ್ಟಣ್ಣ, ಲಕ್ಷ್ಮೀಪತಿಗೆ ವಿಷ್ಣು ಪ್ರಶಸ್ತಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
s narayan gets life time achievement award
S Narayan

ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿದೆ. 2017 ಸಾಲಿನ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದೆ. 

ಡಾ.ರಾಜ್‍ಕುಮಾರ್ ಪ್ರಶಸ್ತಿ, ಲಕ್ಷ್ಮಿಯವರಿಗೆ ಸಂದಿದೆ. ಜ್ಯೂಲಿ ಲಕ್ಷ್ಮಿ ಎಂದೇ ಖ್ಯಾತರಾದ ಲಕ್ಷ್ಮಿ, ಡಾ.ರಾಜ್ ಜೊತೆ ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ರವಿಚಂದ್ರ, ಒಲವು ಗೆಲುವು, ಗೋವಾದಲ್ಲಿ ಸಿಐಡಿ 999 ಚಿತ್ರಗಳಲ್ಲಿ ನಟಿಸಿದ್ದವರು.

ಡಾ.ವಿಷ್ಣುವರ್ಧನ್ ಪ್ರಶಸ್ತಿ, ಎಸ್.ನಾರಾಯಣ್ ಅವರಿಗೆ ಸಂದಿದೆ. ಎಸ್.ನಾರಾಯಣ್ ಅವರಿಗೂ ಈ ಪ್ರಶಸ್ತಿ ವಿಭಿನ್ನವೇ. ವಿಷ್ಣು ಅವರಿಗಾಗಿ ವೀರಪ್ಪ ನಾಯ್ಕ, ಸೂರ್ಯವಂಶ, ಜಮೀನ್ದಾರ್ರು, ಸಿಂಹಾದ್ರಿಯ ಸಿಂಹ, ವರ್ಷ, ಸಿರಿವಂತ ಚಿತ್ರಗಳನ್ನು ನಿರ್ದೇಶಿಸಿದ್ದವರು.

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಿರಿಯ ನಿರ್ಮಾಪಕ ಜಿ.ಎನ್.ಲಕ್ಷ್ಮೀಪತಿ ಅವರಿಗೆ ನೀಡಲಾಗುತ್ತಿದೆ. ಶಂಕರ್‍ನಾಗ್ ಅಭಿನಯದ ಒಂದಾನೊಂದು ಕಾಲದಲ್ಲಿ, ಚಿತೆಗೂ ಚಿಂತೆ, ನೆಂಟರೋ ಗಂಟುಕಳ್ಳರೋ, ಕಾಡು ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದವರು ಲಕ್ಷ್ಮೀಪತಿ.

ನಟ, ನಿರ್ಮಾಪಕ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ ನಟಿ ಹೇಮಾಚೌಧರಿ, ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಸಂಕಲನಕಾರ ಸುರೇಶ್ ಅರಸ್, ಪತ್ರಕರ್ತನ ಹುಣಸವಾಡಿ ರಾಜನ್ ಸದಸ್ಯರಾಗಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery