` ಪನ್ನಗಾಭರಣ, ನೊಗ್‍ರಾಜ್ ಚಿತ್ರಕ್ಕೆ ಪುನೀತ್ ನಿರ್ಮಾಪಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth tp produce danish's next film
Puneeth, Danish Sait

ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ಪಿಆರ್‍ಕೆ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೆ, ಹೊಸ ವಿಭಿನ್ನ ಕಥೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕವಲುದಾರಿ, ಮಾಯಾಬಜಾರ್ ಚಿತ್ರ ನಿರ್ಮಿಸುತ್ತಿರುವ ಪುನೀತ್, ಈಗ 3ನೇ ಸಿನಿಮಾಗೆ ಕೈ ಹಾಕಿದ್ದಾರೆ. ಪುನೀತ್ ಬ್ಯಾನರ್‍ನ 3ನೇ ಸಿನಿಮಾದ ಹೀರೋ ಡ್ಯಾನಿಷ್ ಸೇ

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ಡ್ಯಾನಿಷ್ ಸೇಠ್, ಈಗ ಪುನೀತ್ ಬ್ಯಾನರ್‍ನಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಪನ್ನಗಾಭರಣ.

ಡ್ಯಾನಿಷ್‍ರನ್ನು ಇದುವರೆಗೆ ನೋಡಿರುವುದಕ್ಕಿಂತ ವಿಭಿನ್ನವಾಗಿ ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಇದು ಪಕ್ಕಾ ಕಾಮಿಡಿ ಸಿನಿಮಾ. ನೊಗ್‍ರಾಜ್ ಪಾತ್ರದ ನೆರಳು ಕೂಡಾ ಡ್ಯಾನಿಷ್ ಪಾತ್ರದ ಮೇಲೆ ಇರುವುದಿಲ್ಲ. ಇದು ಡ್ಯಾನಿಷ್ ಇಮೇಜ್‍ಗೆ ಸೂಕ್ತವಾಗುವ ಚಿತ್ರ ಎಂದಿದ್ದಾರೆ ನಿರ್ದೇಶಕ ಪನ್ನಗಾಭರಣ.

ನೊಗ್‍ರಾಜ್ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ಡ್ಯಾನಿಷ್ ಚಿತ್ರಕ್ಕೆ ಅವರೇ ನಿರ್ಮಾಪಕರು. ನಟಸಾರ್ವಭೌಮ ಚಿತ್ರದಲ್ಲಿ ಬ್ಯುಸಿಯಾಗಿರುವ ಪುನೀತ್, ಕೆಲವೇ ದಿನಗಳಲ್ಲಿ ಎಲ್ಲವನ್ನೂ ಫೈನಲ್ ಮಾಡಲಿದ್ದಾರಂತೆ.

India Vs England Pressmeet Gallery

Odeya Audio Launch Gallery