` ಅಕ್ಟೋಬರ್ 5ಕ್ಕೆ ತೆರೆಯಲಿದೆ ಪುಟ 109 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puta 109 movie image
Puta 109

ಆ ಕರಾಳ ರಾತ್ರಿ ಚಿತ್ರದ ಮೂಲಕ ಜನಮೆಚ್ಚುಗೆ ಗಳಿಸಿದ್ದ ನಿರ್ದೇಶಕ ದಯಾಳ್, ಮತ್ತೊಂದು ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಚಿತ್ರ ಪುಟ 109. ಕರಾಳ ರಾತ್ರಿಯಲ್ಲಿದ್ದ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ, ನವೀನ್ ಕೃಷ್ಣ, ವೈಷ್ಣವಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ನವೀನ್ ಕೃಷ್ಣ, ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ.

ಚಿತ್ರದ ವಿಶೇಷ ಅಂದ್ರೆ ಸಿನಿಮಾದಲ್ಲಿರೋದೇ 25 ದೃಶ್ಯಗಳು. ಆ 25 ದೃಶ್ಯಗಳಲ್ಲಿ 24 ಸೀನ್‍ಗಳು ಮೊದಲ 28 ನಿಮಿಷದಲ್ಲೇ ಮುಗಿದು ಹೋಗ್ತವೆ. ಕಡೆಯ ಸೀನ್ ಮಾತ್ರ 62 ನಿಮಿಷಗಳಷ್ಟು ಸುದೀರ್ಘ. ಇದು ನಿರ್ದೇಶಕ ದಯಾಳ್ ಬಿಚ್ಚಿಟ್ಟಿರುವ ಪುಟ 109ರ ಸಸ್ಪೆನ್ಸ್.

ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರ ಹಿಟ್ ಆದ ಸಂತಸದಲ್ಲಿರೋ ಜಾಕ್ ಮಂಜು, ಪುಟ 109ರ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಿನಿಮಾ ಅಕ್ಟೋಬರ್ 5ರಂದು ರಿಲೀಸ್ ಆಗುತ್ತಿದೆ.

Sri Bharaha Baahubali Pressmeet Gallery

Maya Bazaar Pressmeet Gallery