` ದರ್ಶನ್ ಜಿಮ್‍ಗೆ ಡಾಕ್ಟರ್ಸ್ ಬ್ರೇಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan barred from gym and heavy workouts
Darshan

ಅಪಘಾತದಲ್ಲಿ ಕೈಮೂಳೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀಘ್ರದಲ್ಲೇ ಡಿಸ್‍ಚಾರ್ಜ್ ಆಗಲಿದ್ದಾರೆ. ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆದರೂ ದರ್ಶನ್‍ಗೆ ಕೆಲವು ಕಂಡಿಷನ್ಸ್ ಹಾಕಿದ್ದಾರೆ ವೈದ್ಯರು. ಸದ್ಯದ ಮಾಹಿತಿ ಪ್ರಕಾರ, ದರ್ಶನ್ ಒಂದು ವರ್ಷ ಜಿಮ್ ಮಾಡುವಂತೆಯೇ ಇಲ್ಲ.

ಬಲಗೈಗೆ ಪೆಟ್ಟಾಗಿರುವುದರಿಂದ ತೋಳಿನ ಪಟ್ಟಿ ಹಾಕಲಾಗಿದೆ. 4 ವಾರ ಅದೇ ತೋಳಿನಪಟ್ಟಿಯಲ್ಲಿರಬೇಕು ದರ್ಶನ್. ಮೂಳೆಗೆ ಪೆಟ್ಟಾಗಿರುವ ಕಾರಣ, ಪ್ಲೇಟ್ ಹಾಕಲಾಗಿದೆ. ಅದನ್ನು ತೆಗೆಯೋದೇನಿದ್ದರೂ 2 ವರ್ಷಗಳ ನಂತರ. ಹೀಗಾಗಿ ದರ್ಶನ್ ಭಾರವಾದ ವಸ್ತುಗಳನ್ನು ಎತ್ತುವುದಾಗಲೀ, ಬಲಗೈ ಮೇಲೆ ಹೆಚ್ಚಿನ ಒತ್ತಡ ಹೇರುವುದಾಗಲೀ ಮಾಡುವಂತಿಲ್ಲ. ಹೀಗಾಗಿ ದರ್ಶನ್ ಕನಿಷ್ಠ 1 ವರ್ಷ ಜಿಮ್, ವ್ಯಾಯಾಮಗಳಿಂದ ದೂರ ಉಳಿಯಲೇಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery