ಭೂಮಿ ತೂಕದ ಆನೆ.. ಬೆಳೆದ ತನ್ನಿಂದ ತಾನೆ.. ಕೂಗಿ ಹೇಳಿತು ಜಮಾನಾ.. ಅಭಿಮಾನಿಗಳ ಸುಲ್ತಾನ.. ಅಕ್ಷರಗಳ ಜೊತೆ ಆಟವಾಡುತ್ತಲೇ ಹೋರಿಗಳ ಜೊತೆ ನಿಂತಿರುವ ದರ್ಶನ್ ಕಾಣಿಸಿಕೊಳ್ತಾರೆ. ಇದು ಯಜಮಾನನ ಫಸ್ಟ್‍ಲುಕ್. ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾ ಟೀಂ.
ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್‍ನಲ್ಲಿದ್ದ ಯಜಮಾನನ ಫಸ್ಟ್‍ಲುಕ್ ಪೋಸ್ಟರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವುದು ನಿಜ. ಕುಮಾರ್ ನಿರ್ದೇಶನದ ಚಿತ್ರದ ಪೋಸ್ಟರ್‍ನಲ್ಲಿ ಚಿತ್ರದ ಕಥೆಯ ಸುಳಿವೂ ಇದೆಯಂತೆ.
ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ದರ್ಶನ್‍ಗೆ ನಾಯಕಿ.