ತೆಲುಗಿನಲ್ಲಿ ರವಿತೇಜ ಮಾಸ್ ಮಹಾರಾಜ ಎಂದೇ ಫೇಮಸ್. ರವಿತೇಜ ಅವರ ಹೊಸ ಚಿತ್ರ ಯಾವುದೇ ಆದರೂ ಹೀರೋಯಿನ್ ಯಾರಿರಬಹುದು ಎಂಬ ಕುತೂಹಲ ಇದ್ದೇ ಇರುತ್ತೆ. ರವಿತೇಜ ಅವರ ಹೊಸ ಸಿನಿಮಾಗೆ ನಭಾ ನಟೇಶ್ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ವಜ್ರಕಾಯದಲ್ಲಿ ಶಿವರಾಜ್‍ಕುಮಾರ್ ಎದುರು ಗಮನ ಸೆಳೆದಿದ್ದ ನಭಾ ನಟೇಶ್, ಇತ್ತೀಚೆಗಷ್ಟೇ ತೆಲುಗಿಗೂ ಕಾಲಿಟ್ಟಿದ್ದಾರೆ. ರವಿಬಾಬು ನಿರ್ದೇಶನದ ತೆಲುಗು ಸಿನಿಮಾ ರಿಲೀಸ್ ಆಗುತ್ತಿರುವಾಗಲೇ ಇನ್ನೊಂದು ಹೊಸ ಸಿನಿಮಾ, ಅದೂ ರವಿತೇಜ ಜೊತೆ ನಟಿಸೋಕೆ ಓಕೆ ಆಗಿದ್ದಾರೆ.