ಅಂಬಿ ನಿಂಗ್ ವಯಸ್ಸಾಯ್ತೋ.. 14 ವರ್ಷಗಳ ನಂತರ ಅಂಬರೀಷ್ ನಾಯಕರಾಗಿ ನಟಿಸಿರುವ ಸಿನಿಮಾ. ಮುಂದಿನ ವಾರ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಅದೆಷ್ಟು ವಿಶೇಷಗಳಿವೆಯೆಂದರೆ ಅಭಿಮಾನಿಗಳು ಥ್ರಿಲ್ಲಾಗುವಂತಿದೆ.
ಅಂಬಿ ಸ್ಪೆಷಲ್ ನಂ.1 - ರೆಬಲ್‍ಸ್ಟಾರ್ ಅಂಬರೀಷ್ 14 ವರ್ಷಗಳ ನಂತರ ಸೋಲೋ ಹೀರೋ ಆಗಿ ನಟಿಸಿದ್ದಾರೆ.
ಅಂಬಿ ಸ್ಪೆಷಲ್ ನಂ.2 - ಒಂದೇ ಪಾತ್ರದಲ್ಲಿ ಇಬ್ಬರು ಸೂಪರ್ ಸ್ಟಾರ್‍ಗಳು ನಟಿಸಿದ್ದಾರೆ. ಅಂಬರೀಷ್ ಯಂಗ್ ಆಗಿರುವ ಪಾತ್ರದಲ್ಲಿ ಸುದೀಪ್ ನಟಿಸಿರುವುದು ಸ್ಪೆಷಲ್.
ಅಂಬಿ ಸ್ಪೆಷಲ್ ನಂ.3 - ಸುಹಾಸಿನಿಯೂ ಡಬಲ್ ಆಗಿದ್ದಾರೆ. ಅಂಬರೀಷ್ ಅವರಂತೆಯೇ ಸುಹಾಸಿನಿ ಅವರ ಯಂಗ್ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದಾರೆ.
ಅಂಬಿ ಸ್ಪೆಷಲ್ ನಂ.4 - ಒಂದು ಪಾತ್ರದಲ್ಲಿ ಇಬ್ಬರು ಕಲಾವಿದರು ನಟಿಸಿರುವುದು ಕನ್ನಡದಲ್ಲಿ ಮೊದಲ ಪ್ರಯೋಗ.
ಅಂಬಿ ಸ್ಪೆಷಲ್ ನಂ.5 - ಚಿತ್ರದ ನಿರ್ದೇಶಕ ಗುರುದತ್ ಗಾಣಿಗ. ಹೊಸ ಹುಡುಗ. ಅಂಬರೀಷ್ ಚಿತ್ರಗಳನ್ನು ನಿರ್ದೇಶಿಸಿರುವ ಅತ್ಯಂತ ಕಿರಿಯ ನಿರ್ದೇಶಕ. ಅಂಬರೀಷ್ ಪುತ್ರ ಅಮರ್‍ಗಿಂತಲೂ ಚಿಕ್ಕವರು ಗುರುದತ್ ಗಾಣಿಗ.
ಅಂಬಿ ಸ್ಪೆಷಲ್ ನಂ.6 - ಮೊದಲ ಸಿನಿಮಾದಲ್ಲಿಯೇ ಪುಟ್ಟಣ್ಣ ಕಣಗಾಲ್‍ರಂಹ ಸ್ಟಾರ್ ನಿರ್ದೇಶಕರಿಂದ ಆ್ಯಕ್ಷನ್ ಕಟ್ ಹೇಳಿಸಿಕೊಂಡಿದ್ದ ಅಂಬರೀಷ್, ಗುರುದತ್ ಗಾಣಿಗ ಅವರ ಎದುರಲ್ಲೂ ಅಷ್ಟೇ ಪ್ರೀತಿಯಿಂದ ನಟಿಸಿರುವುದು ಇನ್ನೊಂದು ಸ್ಪೆಷಲ್.
ಅಂಬಿ ಸ್ಪೆಷಲ್ ನಂ.7 - 14 ವರ್ಷಗಳ ಹಿಂದೆ ಅಂಬರೀಷ್ ಗೌಡ್ರು ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಕರ್ಣನ ಸಂಪತ್ತು ಅದಾದ ಮೇಲೆ ತೆರೆಗೆ ಬಂದಿತಾದರೂ, ಅದು 90ರ ದಶಕದ ಸಿನಿಮಾ. ಹೀಗಾಗಿ ಗೌಡ್ರು, ಅಂಬಿ ಸೋಲೋ ಹೀರೋ ನಟಿಸಿದ್ದ ಕೊನೆಯ ಸಿನಿಮಾ. ಅದಾದ ಮೇಲೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅಂಬಿ ಸ್ಪೆಷಲ್ ನಂ.8 - ಅಂಬರೀಷ್ ಬಿಳಿ ಮೀಸೆ, ಗಡ್ಡದಲ್ಲಿ ನಟಿಸಿರುವುದು ಇದೇ ಮೊದಲು. ಅಂಬರೀಷ್ ಗಿರಿಜಾ ಮೀಸೆ ಸಖ್ಖತ್ತಾಗಿದೆ.
ಅಂಬಿ ಸ್ಪೆಷಲ್ ನಂ.9 - ಅಂಬಿ ನಿಂಗ್ ವಯಸ್ಸಾಯ್ತೋ ಕಿಚ್ಚ ಸುದೀಪ್ ನಿರ್ಮಾಣದ ಸಿನಿಮಾ. ಒಬ್ಬ ಸ್ಟಾರ್ ಚಿತ್ರವನ್ನು ಇನ್ನೊಬ್ಬ ಸ್ಟಾರ್ ನಿರ್ಮಿಸಿರುವುದು ಕೂಡಾ ವಿಶೇಷ. ಜಾಕ್ ಮಂಜು ಚಿತ್ರದ ಇನ್ನೊಬ್ಬ ನಿರ್ಮಾಪಕ.
ಅಂಬಿ ಸ್ಪೆಷಲ್ ನಂ.10 - ಅಂಬರೀಷ್‍ಗೆ ಈ ಪಾತ್ರ ಹಾಗೂ ಚಿತ್ರವನ್ನು ಮಾಡಿ ಎಂದು ಸಲಹೆ ನೀಡಿದವರು ರಜನಿಕಾಂತ್.