ರ್ಯಾಂಬೋ 2 ಸಕ್ಸಸ್ ಖುಷಿಯಲ್ಲಿರುವ ಶರಣ್, ವಿಕ್ಟರಿ2ಗೆ ದೊಡ್ಡ ಮಟ್ಟದಲ್ಲಿ ರೆಡಿಯಾಗುತ್ತಿದ್ದಾರೆ. ಒನ್ಸ್ ಎಗೇಯ್ನ್, ಕಾಮಿಡಿ ಸಬ್ಜೆಕ್ಟ್. ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಶರಣ್ ಟೀಂಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ ದರ್ಶನ್.
ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ಕೊಟ್ಟಿರೋ ದರ್ಶನ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಾರಣ ಇಷ್ಟೇ, ದರ್ಶನ್ ಅವರ ಯಜಮಾನ ಚಿತ್ರದ ಶೂಟಿಂಗ್ ಕೂಡಾ ಅಲ್ಲಿಯೇ ನಡೆಯುತ್ತಿತ್ತು. ಶೂಟಿಂಗ್ ಮಧ್ಯೆಯೇ ವಿಕ್ಟರಿ 2 ತಂಡದ ಶೂಟಿಂಗ್ ಬಗ್ಗೆ ತಿಳಿದುಕೊಂಡ ದರ್ಶನ್, ತಕ್ಷಣ ವಿಕ್ಟರಿ ಸೆಟ್ಗೆ ಭೇಟಿ ಕೊಟ್ಟು ಸರ್ಪ್ರೆಸ್ ಕೊಟ್ಟಿದ್ಧಾರೆ.
ದರ್ಶನ್ ಆಗಮನ ಸಹಜವಾಗಿಯೇ ವಿಕ್ಟರಿ2 ತಂಡದ ಖುಷಿ ಹೆಚ್ಚಿಸಿದೆ. ಶರಣ್ ನಾಯಕರಾಗಿರುವ ವಿಕ್ಟರಿ 2 ಸಿನಿಮಾಗೆ ತರುಣ್ ಶಿವಪ್ಪ ನಿರ್ಮಾಪಕ. ರವಿಶಂಕರ್ ಕೂಡಾ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಸಂತು ನಿರ್ದೇಶಕ. ವಿಕ್ಟರಿ 2 ಸಿನಿಮಾ ನವೆಂಬರ್ 1ಕ್ಕೆ ರಿಲೀಸ್ ಆಗಲಿದೆ.